Site icon PowerTV

Stand with B Dayanand ; ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ. ದಯಾನಂದ್ ಸೇರಿದಂತೆ 5 ಪ್ರಮುಖ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ I Stand With B Dayanand IPS ಎಂದು ಜನರು ಅಭಿಯಾನ ಶುರುಮಾಡಿಕೊಂಡಿದ್ದು. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಪೊಲೀಸ್​ ಅಧಿಕಾರಿಗಳನ್ನು ಬಲಿಪಶು ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು. ಕಮಿಷನರ್​ ಬಿ. ದಯಾನಂದ್ ಅಮಾನತಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಭಾರೀ ಚರ್ಚೆಯಾಗುತ್ತಿದ್ದು. ಸರ್ಕಾರದ ನಿರ್ಧಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಯಾನಂದ್​ಗೆ ಬೆಂಬಲಿಸಿ ಹಲವು ಪೋಸ್ಟ್ ಗಳು ವೈರಲ್ ಆಗುತ್ತಿದ್ದು. ಕಮೀಷನರ್ ಆಗಿದ್ದ ವೇಳೆ ದಯಾನಂದ್ ಕಾರ್ಯವೈಖರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿ, ಅವರ  ದಕ್ಷತೆ, ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ಮತ್ತು ವ್ಯಾಪಕ ಪ್ರೋತ್ಸಾಹ ಕೇಳಿ ಬರುತ್ತಿದೆ. ಜೊತೆಗೆ ದಯಾನಂದ್ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯ ಮಾಡಲಾಗುತ್ತಿದೆ.

ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಆಕ್ರೋಶ..!

ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಕೂಡ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು. ‘ ಪೊಲೀಸರ ಅಮಾನತು ಮಾಡಿರುವುದು ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ, ಸತ್ಯ ಹೇಳಿದ್ದಕ್ಕೆ ಸರ್ಕಾರ ಇಂತಹ ಬಹುಮಾನ ನೀಡಿದೆ. ಪೊಲೀಸರು ಬೆಂಗಳೂರನ್ನು ಸುರಕ್ಷಿತವಾಗಿರಿಸಲು ರಾತ್ರಿಯಿಡಿ ಶ್ರಮಿಸಿದ್ದರು. ಆದರೆ ಉಪಮುಖ್ಯ ಮಂತ್ರಿಗಳು ಡೆತ್​ ಮಾರ್ಚ್​ ಆಯೋಜಿಸಿದ್ದರು.

ಈ ವಿಶಯ ಕರ್ನಾಟಕದಲ್ಲಿ ಎಲ್ಲರಿಗೂ ತಿಳಿದಿದೆ.  ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕ, ಹೇಡಿ, ಭಯಭೀತರಾಗಿರಲಿಲ್ಲ. ಸರ್ಕಾರವು ತನ್ನ ಕೈಗಳ ಮೇಲೆ ರಕ್ತವನ್ನು ಮೆತ್ತಿಕೊಂಡಿದೆ. ಇದೀಗ ಮೆದುಳನ್ನು ಕೂಡ ಸರ್ಕಾರ ಕಳೆದುಕೊಂಡಿದೆ ಎಂದು ಭಾಸ್ಕರ್​ ರಾವ್​ ಕಿಡಿಕಾರಿದ್ದಾರೆ.

Exit mobile version