ಬೆಳಗಾವಿ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ “ಇಂಟಲಿಜೆನ್ಸ್ ಫೇಲ್ ಆಗಿದೆ, ಆರ್‌ಸಿಬಿ ಕಪ್ ಗೆದ್ದಿದೆ ಅಂತ ವಿಧಾನ ಸೌದ ಮುಂಭಾಗದಲ್ಲಿ ಸನ್ಮಾನ ಮಾಡೋ ಅವಶ್ಯಕತೆ ಇರ್ಲಿಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ “ಇಂಟಲಿಜೆನ್ಸ್ ಫೇಲ್ ಆಗಿದೆ,
ಆರ್‌ಸಿಬಿ ಕಪ್ ಗೆದ್ರೂ ಅಂತಾ ವಿಧಾನಸೌಧ ಮುಂದೆ ಸನ್ಮಾನ ಮಾಡಿದ್ರೂ. ಅದೇ ದಿನ ಸನ್ಮಾನ ಮಾಡೋ ಅವಶ್ಯಕತೆ ಇರ್ಲಿಲ್ಲ. ಆರ್‌ಸಿಬಿ ಫ್ರಾಂಚೈಸಿ ತಗೊಂಡವರು ಕಾರ್ಯಕ್ರಮ ಮಾಡಿದಾರೆ. ಇದೇ ಕಾರಣಕ್ಕೆ ನಿನ್ನೆ ಕ್ಯಾಬಿನೆಟ್ನಲ್ಲಿ ಕ್ರಮಕ್ಕೆ ಒತ್ತಾಯಿಸಲಾಯಿತು ಎಂದು ಹೇಳಿದರು. ಇದನ್ನೂ ಓದಿ :ಅಂತರ್ ರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಪಿಯೂಷ್ ಚಾವ್ಲಾ
ಪೊಲೀಸರ ಮೇಲೆ ತೆಗೆದುಕೊಂಡ ಕ್ರಮವನ್ನ ಸಮರ್ಥಿಸಿಕೊಂಡ ರಾಮಲಿಂಗರೆಡ್ಡಿ..!
ಪೊಲೀಸ್ ಕಮಿಷನರ್ ಸೇರಿದಂತೆ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಘಟನೆ ಕುರಿತು ಮಾತನಾಡಿದ ಸಚಿವರು “ಅನುಮತಿ ಇಲ್ಲದೇ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಪೊಲೀಸರ ಮೇಲೆ ಕ್ರಮ ಕೈಗೊಂಡಿದೆ. ಪೊಲೀಸರೇ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಅವರೇ ಕಂಟ್ರೋಲ್ ಮಾಡಬೇಕಿತ್ತು.
ಸ್ಟೇಡಿಯಂನಲ್ಲಿ ಸನ್ಮಾನ ಮಾಡಲು ಅನುಮತಿ ಇತ್ತಾ. ಪರ್ಮಿಷನ್ ಯಾರು ಕೊಡಬೇಕಿತ್ತು. ಇಂಟಲಿಜೆನ್ಸಿ ಏನೂ ಮಾಡುತ್ತಿತ್ತು. ಇದನ್ನೂ ಓದಿ :ರಾಮ ಮಂದಿರಕ್ಕೆ ಚಿನ್ನದ ಕಿರೀಟಗಳು ಸೇರಿದಂತೆ ಕೋಟ್ಯಾಂತರ ಮೌಲ್ಯದ ಆಭರಣ ದಾನ ನೀಡಿದ ಉದ್ಯಮಿ
ಎರಡ್ಮೂರು ಲಕ್ಷ ಜನ ಸೇರಿದ್ದಾರೆ, ಫ್ರಾಂಚೈಸಿ ತಗೊಂಡವರು ಪ್ರವೇಶ ಉಚಿತ ಅಂತಾರೆ. ಅವರದೆಲ್ಲಾ ತಪ್ಪಿದೆ ತಾನೇ, ಅನುಮತಿ ಇಲ್ಲದೇ ಆ ರೀತಿ ಮಾಡಬಹುದಾ. ಪರ್ಮಿಷನ್ ತಗೊಂಡು ಮಾಡಬೇಕೋ ಬೇಡ್ವೋ. ಮೃತ ಪಟ್ಟಿರುವ ಮಕ್ಕಳನ್ನ ನಾವು ಮತ್ತೆ ವಾಪಾಸ್ ತರಲು ಆಗಲ್ಲ ಎಂದು ರಾಮಲಿಂಗ ರೆಡ್ಡಿಯವರು ಅಸಮಧಾನ ವ್ಯಕ್ತಪಡಿಸಿದರು.



This is a fantastic resource for anyone.
This is exactly what I was looking for. Bookmarked!