ಕಂಟೈನರ್​ ಲಾರಿ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ; ಮೂವರು ಸಾ*ವು

ತುಮಕೂರು: ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ನೈಟ್​ ಶಿಫ್ಟ್​ ಕೆಲಸ ಮುಗಿಸಿ ರೂಮಿಗೆ ತೆರಳುತ್ತಿದ್ದ ಮೂವರು ಚಿರನಿದ್ರೆಗೆ ಜಾರಿದ್ದಾರೆ. ಇದನ್ನೂ ಓದಿ :ಕಾಲ್ತುಳಿತ ಪ್ರಕರಣ; ಆರ್​ಸಿಬಿ ಮಾರ್ಕೆಟಿಂಗ್​ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು

ತುಮಕೂರಿನ ನಂಧಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಂ.48ರಲ್ಲಿ ಘಟನೆ ನಡೆದಿದ್ದು. ಮೃತ ರಾಜೇಶ್​, ಧನಂಜಯ್​ ಮತ್ತು ಧನುಷ್​ ಮೂವರು ನೈಟ್​ ಶಿಫ್ಟ್​ ಕೆಲಸ ಮುಗಿಸಿ ಉಪ್ಪಾರಹಳ್ಳಿಯಲ್ಲಿರುವ ರೂಮಿನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಪೆಟ್ರೋಲ್​ ಬಂಕ್​ನಿಂದ ಹೊರಬಂದ ಕಂಟೈನರ್ ಲಾರಿಗೆ ಬೈಕ್​ ಡಿಕ್ಕಿಯಾಗಿದ್ದು. ಬೈಕ್​ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ :ಉತ್ತರಾ​ಖಂಡ್​; ಸ್ವಂತ ಮಗಳ ಮೇಲೆ ಬಾಯ್​ಫ್ರೆಂಡ್​​ನಿಂದ ಅತ್ಯಾಚಾರ ಮಾಡಿಸಿದ ತಾಯಿ..!

ಕ್ಯಾತಸಂದ್ರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಘಟನ ಸ್ಥಳಕ್ಕೆ SP ಅಶೋಕ್​ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES