ಲಕ್ನೋ: ಮೂರು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿರುವ ಘಟನೆ ಲಕ್ನೋದಲ್ಲಿ ನಡೆದಿದ್ದು. ಸಾವನ್ನಪ್ಪಿದ ಆರೋಪಿಯನ್ನು ದೀಪಕ್ ವರ್ಮಾ ಎಂದು ಗುರುತಿಸಲಾಗಿದೆ.
ಲಕ್ನೋದ ಅಲಂಬಾಗ್ ಪ್ರದೇಶದಲ್ಲಿ ಬಾಲಕಿ ತನ್ನ ಪೋಷಕರ ಜೊತೆಗೆ ಚಂದಾನಗರ ಮೆಟ್ರೋ ನಿಲ್ದಾಣದ ಬಳಿ ಮಲಗಿದ್ದಳು. ಈ ವೇಳೆ ಆರೋಪಿ ದೀಪಕ್ ವರ್ಮಾ ಬೆಳಗಿನ ಜಾವ 3:30ಕ್ಕೆ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ನಂತರ ಪ್ರಜ್ಞಾಹೀನಳಾಗಿದ್ದ ಬಾಲಕಿಯನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದಾಗ ಮೆಟ್ರೋ ಸೇತುವೆ ಬಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದನ್ನೂ ಓದಿ :ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮೋದಿ; ಕಾಶ್ಮೀರದಲ್ಲಿ ರಾರಾಜಿಸಿ ತಿರಂಗ
CCTV footage shows suspect Deepak Verma abducting the 2.5 year-old-girl who was sleeping next to her parents in UP’s Lucknow. The girl, fighting for her life in the hospital, was brutally raped and left to die. Suspect Verma was killed in encounter earlier today. https://t.co/f0A3g60g2f pic.twitter.com/7s6oIXb31d
— Piyush Rai (@Benarasiyaa) June 6, 2025
ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಅಷ್ಟೇ ಅಲ್ಲದೇ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಸ್ಕೂಟರ್‌ನ ನೋಂದಣಿ ವಿವರಗಳು ಮತ್ತು ಸುಳಿವು ಆಧರಿಸಿ ಕಂಟೋನ್ಮೆಂಟ್‌ನ ದೇವಿ ಖೇಡಾ ಬಳಿ ಪೊಲೀಸರು ದೀಪಕ್‌ನನ್ನು ತಡೆದು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ :ನಾವು ರಾಜೀನಾಮೆ ಕೊಡ್ತೀವಿ; ಪಹಲ್ಗಾಂ, ಕುಂಭಮೇಳದ ಘಟನೆಗೆ ಅವರು ರಾಜಿನಾಮೆ ಕೊಡ್ಲಿ; ಖರ್ಗೆ
#WATCH | Lucknow, UP | Accused in the rape of a three-year-old who had a reward of Rs. 1 lakh on him, was injured in an exchange of fire with the police
(Visuals from the encounter spot) pic.twitter.com/KtCP7h3apM
— ANI (@ANI) June 5, 2025


