Thursday, August 21, 2025
Google search engine
HomeASTROLOGYಸರ್ಕಾರ, ಪೊಲೀಸರು, KSCA; ಹನ್ನೊಂದು ಜನರ ಸಾವಿಗೆ ಕಾರಣವಾಯ್ತು ಈ ಮೂರು ಕಾರಣಗಳು

ಸರ್ಕಾರ, ಪೊಲೀಸರು, KSCA; ಹನ್ನೊಂದು ಜನರ ಸಾವಿಗೆ ಕಾರಣವಾಯ್ತು ಈ ಮೂರು ಕಾರಣಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಮಯದಲ್ಲಿ ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದಾರೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದ ಸಾವಿರಾರು ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ. ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಿಂದಾಗಿ ಸಂಭ್ರಮದ ವಾತಾವರಣ ದುಃಖದಲ್ಲಿ ಮುಳುಗಿದೆ. ಹಾಗಾದರೆ ಈ 11 ಸಾವಿಗೆ ಕಾರಣವೇನು ಎಂಬ ಚರ್ಚೆಗಳು ಆರಂಭವಾಗಿದೆ. ಇದನ್ನೂ ಓದಿ :ಕಾಂಗ್ರೆಸ್​ ಕ್ರೆಡಿಟ್​ ತೆಗೆದುಕೊಳ್ಳಲು ಹೋಗಿ ಸಂಭ್ರಮದ ಕ್ಷಣವನ್ನ ಸೂತಕವಾಗಿ ಮಾಡಿದೆ; ಆರ್​.ಅಶೋಕ್​

ಕಾರಣ 01: ಸರಿಯಾಗಿ ಟಿಕೆಟ್​ ವ್ಯವಸ್ಥೆ KSCA..!

ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​, ಬರುವ ಅಭಿಮಾನಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಸರಿಯಾದ ಟಿಕೆಟ್ ವ್ಯವಸ್ಥೆ ಮಾಡದೆಯೇ ಯಡವಟ್ಟು ಮಾಡಿಕೊಂಡಿದ್ದು. ಸಂಜೆ ವೇಳೆಗೆ ಟಿಕೆಟ್​ ಫ್ರೀ ಎಂದು ಘೋಷಿಸಿದ್ದು ಅನಾಹುತಕ್ಕೆ ಎಡೆಮಾಡಿಕೊಟ್ಟಿತು.

ಕಾರಣ 02: ಸರ್ಕಾರದ ಮಹಾ ಯಡವಟ್ಟು..!

ರಾಜ್ಯ ಸರ್ಕಾರವೂ ನಿನ್ನೆ ನಡೆದಿರುವ ದುರಂತಕ್ಕೆ ಕಾರಣವೆಂದು ಚರ್ಚೆಗಳು ಆರಂಭವಾಗಿದ್ದು. ಸರಿಯಾದ ನಿರ್ಧಾರ ಕೈಗೊಳ್ಳದೆ ರಾಜ್ಯ ಸರ್ಕಾರ 11 ಜನರ ಸಾವಿಗೆ ಕಾರಣವಾಗಿದೆ, ಐಪಿಎಲ್​ ಟ್ರೋಫಿ ಗೆದ್ದ ಮರುದಿನವೇ ಸಂಭ್ರಮಚಾರಣೆಗೆ ಅನುವು ಮಾಡಿಕೊಟ್ಟಿದ್ದು, ಜೊತೆಗೆ ವಿಕ್ಟರಿ ಪರೇಡ್​ ಬಗ್ಗೆ ಖಚಿತತೆ ಇಲ್ಲದೆ ಇರುವುದು ಅನಾಹುತಕ್ಕೆ ಕಾರಣವಾಗಿದೆ. ಇದನ್ನೂ ಓದಿ :ಸಂಭ್ರಮಚರಣೆ ವೇಳೆ ಕಾಲ್ತುಳಿತ; ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಅಭಿಮಾನಿಗಳು, ಸಂಚಾರದಲ್ಲಿ ವ್ಯತ್ಯಯ

ಜೊತೆಗೆ ಪೊಲೀಸರು ವಿಧಾನಸೌದದಲ್ಲಿ ಕಾರ್ಯಕ್ರಮ ಬೇಡ ಎಂದರು ಸರ್ಕಾರ ಅದನ್ನ ನಿರ್ಲಕ್ಷಿಸಿದ್ದು. ಮೊದಲು ವಿಧಾನ ಸೌದದಲ್ಲಿ ಸನ್ಮಾನ ಮಾಡಿ ಜನರನ್ನು ಒಂದೆಡೆ ಒಗ್ಗೂಡುವಂತೆ ಮಾಡಿದೆ. ಸನ್ಮಾನದ ನಂತರ ಆಟಗಾರರು ಸ್ಟೇಡಿಯಂ ಕಡೆ ತೆರಳಿದಾಗ ವಿಧಾನ ಸೌದದಲ್ಲಿದ್ದ ಅಷ್ಟು ಜನ ಸ್ಟೇಡಿಯಂ ಕಡೆ ಹೋಗಿದ್ದು ಇದು ಮತ್ತಷ್ಟು ನೂಕು ನುಗ್ಗಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಕಾರಣ 03: ಸರಿಯಾಗಿ ಬಂದೋಬಸ್ತ್​ ಮಾಡದ ಪೊಲೀಸ್​ ಇಲಾಖೆ..!

ಜೂನ್​ 03ರಂದು ಕಪ್​ ಗೆದ್ದ ಸಂಭ್ರಮದಲ್ಲಿದ್ದ ಜನರು ಮಧ್ಯರಾತ್ರಿ 2 ಗಂಟೆಯವರೆಗೂ ಸಂಭ್ರಮಚಾರಣೆ ನಡೆಸಿದ್ದು. ಈ ವೇಳೆ ಪೊಲೀಸರು ನಗರದ ಅನೇಕ ಭಾಗಗಳಲ್ಲಿ ರಕ್ಷಣೆ ನೀಡಿ, ಕಾನೂನು & ಸುವ್ಯವಸ್ಥೆ ಕಾಪಾಡುವಲ್ಲಿ ಸಫಲರಾಗಿದ್ದರು. ಆದರೆ ಮರುದಿನವೇ ಸಂಭ್ರಮಚರನೆ ಹಮ್ಮಿಕೊಂಡಿದ್ದು, ಪೊಲೀಸರ ವೈಪಲ್ಯಕ್ಕೆ ಕಾರಣವಾಗಿದೆ. ಇದನ್ನೂ ಓದಿ :ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾ*ವು; ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಆಕ್ರೋಶ

ಅಷ್ಟೇ ಅಲ್ಲದೇ ವಿಧಾನಸೌದದ ಬಳಿ ಬಂದೋಬಸ್ತಗೆ ಹೆಚ್ಚು ಗಮನಕೊಟ್ಟ ಪೊಲೀಸರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಂದೋಬಸ್ತ್​ ವ್ಯವಸ್ಥೆ ಮಾಡಿಕೊಳ್ಳಲು ನಿರ್ಲಕ್ಷ ತೋರಿಸಿದ್ದಾರೆ. ಬೆಳಿಗ್ಗೆಯೆ ನಗರದ ಬೇರೆ ಭಾಗಗಳಿಂದ ಪೊಲೀಸರನ್ನು ಕರೆಸಿಕೊಳ್ಳದೆ ಗೃಹ ಇಲಾಖೆ ನಿರ್ಲಕ್ಷ ಮಾಡಿದ್ದು. ದುರಂತಕ್ಕೆ ಕಾರಣವಾಗಿದೆ, ಇದರ ಪರಿಣಾಮವಾಗಿ 11 ಮಂದಿ ಸಾವನ್ನಪ್ಪಿದ್ದು 47 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments