Site icon PowerTV

ಬಿಜೆಪಿಯರು ಸಾವಿನ ಮೇಲೆ ರಾಜಕೀಯ ಮಾಡ್ತಿದ್ದಾರೆ; ಘಟನೆ ನೆನೆದು ಡಿಕೆಶಿ ಕಣ್ಣೀರು..!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿರುವ ಕಾಲ್ತುಳಿತದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ನೋವಿನಿಂದ ಕಣ್ಣೀರಾಕಿದ್ದು, ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ ಅಂತ ಅಂದ್ಕೊಡಿರಲಿಲ್ಲ, ನಮ್ಮ ಮನೇಲಿ ಇಂತಹ ಘಟನೆ ಆಗಿದೆ ಅನ್ನೋ ಅಷ್ಟು ನೋವಾಗುತ್ತಿದೆ. ಬಿಜೆಪಿಯವರು ಸಾವಿನ ಮೇಲೆ ರಾಜಕೀಯ ಮಾಡೋದು ಬೇಡ ಎಂದು ಕಣ್ಣೀರಾಕಿದ್ದಾರೆ. ಇದನ್ನೂ ಓದಿ :IPL 2025; ಆರ್​ಸಿಬಿ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಾಜಿ ಪ್ರಧಾನಿ ರಿಷಿ ಸುನಕ್​

ಮಾಧ್ಯಮದ ಮುಂದೆ ಮಾತನಾಡುತ್ತ ಕಣ್ಣೀರಾಕಿದ ಡಿಕೆ. ‘ಚಿಕ್ಕ ಮಕ್ಕಳು ಸಾವನ್ನಪ್ಪಿದ್ದಾರೆ, 10 ಮಕ್ಕಳನ್ನ ಶವವನ್ನು ನನ್ನ ಕಣ್ಣಲ್ಲಿ ನೋಡಿದ್ದೇನೆ, ಇಂತಹ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಪೊಲೀಸರ ಸಲಹೆ ಪ್ರಕಾರ ಕಾರ್ಯಕ್ರಮವನ್ನು 15 ನಿಮಿಷದಲ್ಲಿ ಮುಗಿಸಿದ್ದೇವೆ. ನಾನೇ ಕೆಎಸ್​ಸಿಎಗೆ ಹೇಳಿ ಯಾವುದೇ ಸಂಭ್ರಮಚರಣೆ ಮಾಡಬೇಡಿ ಅಂತ ಹೇಳಿ ಬೇಗನೆ ಕಾರ್ಯಕ್ರಮ ಮುಗಿಸಿದೆ, ನಾನು ಬೇರೆ ರಾಜಕಾರಣಿಗಳ ಬಗ್ಗೆ ಮಾತನಾಡಲ್ಲ, ಅವರು ಕೇವಲ ಚೇಸ್ಟೇ ಮಾಡ್ತಾರೆ ಎಂದು ಹೇಳಿದರು. ಇದನ್ನೂ ಓದಿ :ಬೆಂಗಳೂರಿಗೆ ಬಂದಿಳಿದ ‘ರೆಡ್​ ಆರ್ಮಿ’; ಕನ್ನಡ ಧ್ವಜ ಕೊಟ್ಟು ಸ್ವಾಗತಿಸಿದ ಡಿಕೆಶಿ

ಸಾವಿನ ಮೇಲೆ ರಾಜಕೀಯ ಮಾಡೋದು ವಿಪಕ್ಷಗಳ ಅಜೆಂಡಾ..!

ಬಿಜೆಪಿ ಮತ್ತು ಜೆಡಿಎಸ್​ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆಶ ಶಿವಕುಮಾರ್​ ‘ವಿಪಕ್ಷಗಳು ಸಾವಿನ ಮೇಲೆ ರಾಜಕೀಯ ಮಾಡೋದು ಅಜೆಂಡ ಮಾಡಿಕೊಂಡಿದ್ದಾರೆ. ನಡೆದಿರುವ ದುರಂತ ಇಡೀ ಕರ್ನಾಟಕಕ್ಕೆ ಕಳಂಕ ತಂದಿದೆ. 18 ವರ್ಷಗಳ ನಂತರ ಕಪ್​ ಬಂದಿದೆ ಅಂದಾಗ ಸಹಜವಾಗಿ ಅಭಿಮಾನ ಇರುತ್ತೆ. ಘಟನೆ ಬಗ್ಗೆ ಸಿಎಂ, ಗೃಹ ಸಚಿವರು, ಇಡೀ ಸರ್ಕಾರಕ್ಕೆ ಆಘಾತ ತಂದಿದೆ. ಇದನ್ನೂ ಓದಿ :ಸರ್ಕಾರ, ಪೊಲೀಸರು, KSCA; ಹನ್ನೊಂದು ಜನರ ಸಾವಿಗೆ ಕಾರಣವಾಯ್ತು ಈ ಮೂರು ಕಾರಣಗಳು

ಇಷ್ಟು ದೊಡ್ಡ ಘಟನೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ, ನಾನು ವಿಪಕ್ಷದ ಟೀಕೆ ಗೆ ಮಾತನಾಡಲ್ಲ. ನಾನು ಜನರಿಗೆ ಮಾತ್ರ ಉತ್ತರ ಕೊಡ್ತೀನಿ
ಇವರೆಲ್ಲಾ ಪೊಲಿಟಿಕಲ್ ಮಾಡೋ ಮಾಸ್ಟರ್ ಮೈಂಡ್ಸ್ ಅಷ್ಟೆ ಎಂದು ಡಿ,ಕೆ ಶಿವಕುಮಾರ್ ಹೇಳಿದರು.

Exit mobile version