Site icon PowerTV

ಮದ್ವೆಗೆ ಹುಡುಗಿ ನೋಡ್ಕೊಂಡು ಬೆಂಗಳೂರಿಗೆ ಬಂದಿದ್ದ ಯುವಕ ಸಾ*ವು ; ಪೋಷಕರ ಆಕ್ರಂದನ

ಮಂಡ್ಯ: ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿ ಉಂಟಾದ ಕಾಲ್ತುಳಿತಕ್ಕೆ ಈ ದೇಶದ 11 ಯುವಕರು ಸಾವನ್ನಪ್ಪಿದ್ದಾರೆ. ಈ ಪೈಕಿ ಮಂಡ್ಯದ ಪೂರ್ಣಚಂದ್ರ ಕೂಡ ಸಾವನ್ನಪ್ಪಿದ್ದು. ಮದುವೆಗೆ ಹೆಣ್ಣು ನೋಡಿಕೊಂಡು, ನೇರವಾಗಿ ಬೆಂಗಳೂರಿಗೆ ಬಂದಿದ್ದ ಪೂರ್ಣ ಚಂದ್ರ ಶವವಾಗಿ ತಂದೆ-ತಾಯಿಯ ಮಡಿಲು ಸೇರಿದ್ದಾನೆ.

ಮಂಡ್ಯದ ಕೆ.ಆರ್​ ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಶಿಕ್ಷಕ ಚಂದ್ರು ಮತ್ತು ಕಾಂತಾಮಣಿ ಪುತ್ರ ಪೂರ್ಣಚಂದ್ರ ಮೃತಪಟ್ಟಿದ್ದಾನೆ. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ಪೂರ್ಣಚಂದ್ರ, ಸಿವಿಲ್​ ಇಂಜಿನಿಯರ್​ ವ್ಯಾಸಂಗ ಮಾಡಿ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಮನೆಗೆ ಬಂದಿದ್ದ ಪೂರ್ಣ ಚಂದ್ರ ಆರ್​ಸಿಬಿ ಗೆಲುವನ್ನು ಅದ್ದೂರಿಯಾಗಿ ಸಂಭ್ರಮಿಸಿದ್ದ. ಇದನ್ನೂ ಓದಿ :‘ಸರ್ಕಾರಕ್ಕೆ ನಮ್ಮ ಶಾಪ ತಟ್ಟದೆ ಇರಲ್ಲ’; ಮೃತ ಭೂಮಿಕ್​ ಪೋಷಕರ ಆಕ್ರೋಶ

ಮನೆಯಲ್ಲಿ ಗೆಳೆಯರೊಂದಿಗೆ ಆರ್​ಸಿಬಿ ಗೆಲುವನ್ನು ಸಂಭ್ರಮಿಸಿದ್ದ ಪೂರ್ಣಚಂದ್ರ, ಮರುದಿನ ಕುಟುಂಬಸ್ಥರೊಂದಿಗೆ ಪಾಂಡವಪುರ ತಾಲೂಕಿನ, ಗ್ರಾಮವೊಂದರಲ್ಲಿ ಮದುವೆಗೆ ಹೆಣ್ಣು ನೋಡಿದ್ದನು. ಅಲ್ಲಿಂದ ನೇರವಾಗಿ ಮೈಸೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯವರಿಗೆ ತಿಳಿಸಿದ್ದನು. ಆದರೆ ಪೂರ್ಣಚಂದ್ರ ಕುಟುಂಬಸ್ಥರಿಗೆ ಸುಳ್ಳು ಹೇಳಿ ಸ್ನೇಹಿತರೊಂದಿಗೆ ನೇರವಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದನು. ಆದರೆ ವಿಧಿಯಾಟ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಪೂರ್ಣಚಂದ್ರ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಎರಡನೇ ಮದುವೆಯಾದ ಸಂಸದೆ ಮಹುವಾ ಮೊಯಿತ್ರಾ; ಪೋಟೋ ವೈರಲ್​

ಪೋಷಕರ ಗೋಳು, ಹೇಳತೀರದು..!

ಇತ್ತ ಮೃತ ಪೂರ್ಣಚಂದ್ರನ ತಂದೆ-ತಾಯಿ ಮಗ ಮೈಸೂರಿಗೆ ಕೆಲಸಕ್ಕೆ ಹೊರಟಿದ್ದಾನೆ. ಮಗನಿಗೆ ಹೆಣ್ಣು ನೋಡಿದ್ದೇವೆ ಇನ್ನೇನು ಮದುವೆ ನಿಶ್ಚಯ ಆಗಬಹುದು ಎಂದು ಮನೆಗೆ ಒಂದು ನಿಟ್ಟುಸಿರು ಬಿಡುವಷ್ಟರಲ್ಲಿ ಘೋರ ದುರಂತದಲ್ಲಿ ಮಗ ಬೀದಿ ಹೆಣವಾಗಿದ್ದಾನೆ ಎಂದು ವಿಷಯ ತಿಳಿದಾಗ ಮೃತರ ಕುಟುಂಬಸ್ಥರಿಗೆ ಬರ ಸಿಡಿಲು ಬಡೆದಂತಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಕಾರ್ಯಕ್ರಮ ರೂಪಿಸಿರುವುದು ಸರ್ಕಾರದ ಬೇಜವಾಬ್ದಾರಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ :ಏಕಾಏಕಿ ಮುರಿದು ಬಿತ್ತು ಸ್ಲೀಪರ್​ ಕೋಚ್​ ಬಸ್​ ಸೀಟ್​; KSRTCಗೆ ಹಿಡಿಶಾಪ ಹಾಕಿದ ಪ್ರಯಾಣಿಕರು

Exit mobile version