Site icon PowerTV

ಇಂದು ಸಂಜೆ ಬೆಂಗಳೂರಿನಲ್ಲಿ RCB ವಿಜಯಯಾತ್ರೆ; ಅಭಿಮಾನಿಗಳಲ್ಲಿ ಸಂತಸ

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. 17 ವರ್ಷಗಳಿಂದ ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದ್ದು. ಇಂದು ಸಂಜೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಕ್ಟರಿ ಪರೇಡ್​ ನಡೆಯಲಿದೆ. ಇದನ್ನೂ ಓದಿ :ಸತ್ತ ವ್ಯಕ್ತಿಗೆ ಮರುಜೀವ ನೀಡಿದ ರಸ್ತೆ ಗುಂಡಿ; ವೈದ್ಯಲೋಕವನ್ನೇ ಅಚ್ಚರಿಗೀಡು ಮಾಡಿದೆ ಈ ಘಟನೆ

17 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿಯ ವಿಕ್ಟರಿ ಪರೇಡ್‌ ನಡೆಯಲಿದೆ. ಅಧಿಕೃತವಾಗಿ ಆರ್‌ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ. ಇದನ್ನೂ ಓದಿ :RCB ನನ್ನ ನೆಚ್ಚಿನ ತಂಡ; ಫೈನಲ್​ಗೂ ಮುನ್ನ ಆರ್​ಸಿಬಿಗೆ ಬೆಂಬಲ ಘೋಷಿಸಿದ ರಿಷಿ ಸುನಕ್​

ಫೈನಲ್‌ ಪಂದ್ಯ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್‌ ನಡೆಸಲಾಗುವುದು ಎಂದು ತಿಳಿಸಿದ್ದರು. ಅಭಿಮಾನಿಗಳನ್ನು 12ನೇ ಸೇನೆ ಎಂದೇ ಆರ್‌ಸಿಬಿ ಕರೆಯುತ್ತಿದೆ. ಈ ಕಿರೀಟ ನಿಮಗೆ ಸೇರಿದ್ದು ಎಂದು ಹೇಳಿದೆ. ಇದನ್ನೂ ಓದಿ :ಆಗಿರುವ ನಷ್ಟಕ್ಕಿಂತ, ಫಲಿತಾಂಶ ಮುಖ್ಯ; ಆಪರೇಷನ್​ ಸಿಂಧೂರ್​ ಬಗ್ಗೆ ಸಿಡಿಎಸ್​ ಅನಿಲ್​ ಚೌಹಾಣ್​ ಮಾತು

ಐಪಿಎಲ್‌ ಟ್ರೋಫಿ ಗೆದ್ದ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್‌ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ.

Exit mobile version