ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಪಂದ್ಯವಳಿಯಲ್ಲಿ ಆರ್‌ಸಿಬಿ ತಂಡ ಗೆದ್ದು ಬೀಗಿದ್ದು. ಆರ್‌ಸಿಬಿ ಗೆಲುವಿಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು. ಆರ್‌ಸಿಬಿಯ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದ್ದಾರೆ.
17 ವರ್ಷಗಳ ವನವಾಸ ಅಂತ್ಯವಾಗಿದ್ದು. ಕೊನೆಗೂ ಆರ್‌ಸಿಬಿ ತಂಡ ಪ್ರಶಸ್ತಿಗೆ ಮುತ್ತಿಟ್ಟಿದೆ. ಆರ್‌ಸಿಬಿ ಗೆಲುವುಗೆ ಅಭಿಮಾನಿಗಳ ಸಂಭ್ರಮಚರಣೆ ಮುಗಿಲು ಮುಟ್ಟಿದ್ದು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಶೇಷ ಪೋಸ್ಟ್ವೊಂದನ್ನು ಹಾಕಿ ಅಭಿನಂದನೆ ತಿಳಿಸಿದ್ದಾರೆ. “ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಧೈರ್ಯ ಮತ್ತು ಉತ್ಸಾಹವನ್ನು ಪ್ರದರ್ಶಿಸುವ ಮೂಲಕ ಗಮನಾರ್ಹ ಗೆಲುವಿನ ನಗೆ ಬೀರಿದೆ. ಮುಂದಿನ ಪ್ರಯಾಣದಲ್ಲಿ ಆರ್‌ಸಿಬಿ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇನೆ. ಇದನ್ನೂ ಓದಿ :RCB ಗೆಲುವನ್ನು ಸಂಭ್ರಮಿಸುತ್ತಿದ್ದ ಯುವಕನಿಗೆ ಚಾಕು ಇರಿದ ದುಷ್ಕರ್ಮಿ
Well played RCB! A remarkable win showcasing grit, teamwork, and spirit. Heartiest congratulations to the players, coaches, and loyal fans. Wishing RCB continued success in the journey ahead. pic.twitter.com/YYEkTN0QVC
— Thaawarchand Gehlot (@TCGEHLOT) June 3, 2025
RCB ತಂಡಕ್ಕೆCM ಶುಭ ಹಾರೈಕೆ..!
ಸಾಮಾಜಿಕ ಜಾಲತಾಣ ಎಕ್ಷ್ನಲ್ಲಿ ಸಿಎಂ ಸಿದ್ದರಾಮಯ್ಯ ಆರ್‌ಸಿಬಿ ಗೆಲುವಿಗೆ ಶುಭಾಷಯ ತಿಳಿಸಿದ್ದು. “ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡಿರುವ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಆರ್ಸಿಬಿಯಿಂದ ಸಂಘಟಿತ ಪ್ರದರ್ಶನವಿದೆ. ಇದನ್ನೂ ಓದಿ :ಇಂದು ಸಂಜೆ ಬೆಂಗಳೂರಿನಲ್ಲಿ RCB ವಿಜಯಯಾತ್ರೆ; ಅಭಿಮಾನಿಗಳಲ್ಲಿ ಸಂತಸ
ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ. ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ಸಿಎಂ ಅಭಿನಂದನೆ ತಿಳಿಸಿದ್ದಾರೆ.