Site icon PowerTV

RCB ಗೆಲುವನ್ನು ಸಂಭ್ರಮಿಸುತ್ತಿದ್ದ ಯುವಕನಿಗೆ ಚಾಕು ಇರಿದ ದುಷ್ಕರ್ಮಿ

ಬೆಂಗಳೂರು: ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಚೊಚ್ಚಲ ಕಪ್​ ಮುಡಿಗೇರಿಸಿಕೊಂಡಿದ್ದು. ಇದರ ಸಂಭ್ರಮಚರಣೆಯಲ್ಲಿದ್ದ ಆರ್​ಸಿಬಿ ಅಭಿಮಾನಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿದ್ದಾನೆ. ನಗರದ ಜಾಲಹಳ್ಳಿ ಕ್ರಾಸ್​ ಬಳಿಯಲ್ಲಿ ಘಟನೆ ನಡೆದಿದೆ.

ಆರ್‌ಸಿಬಿ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಜಯಭೇರಿಯಾದ ಹಿನ್ನೆಲೆ ಯುವಕ ಸಂಭ್ರಮಾಚರಣೆ ಮಾಡುತ್ತಾ ಬಾರ್‌ಗೆ ತೆರಳುವ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಯುವಕನ ಕುತ್ತಿಗೆಯ ಭಾಗಕ್ಕೆ ಇರಿದು ಎಸ್ಕೇಪ್ ಆಗಿದ್ದಾರೆ. ತಡರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ. ಇದನ್ನೂ ಓದಿ ;ಇಂದು ಸಂಜೆ ಬೆಂಗಳೂರಿನಲ್ಲಿ RCB ವಿಜಯಯಾತ್ರೆ; ಅಭಿಮಾನಿಗಳಲ್ಲಿ ಸಂತಸ

ಅದೃಷ್ಟವಶಾತ್ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಪ್ರತಿರೋಧ ಬಳಿಕ ದುಷ್ಕರ್ಮಿಗಳ ಗ್ಯಾಂಗ್ ಘಟನಾ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳೀಯರ ಸಹಾಯದಿಂದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version