ಚಂಡೀಗಢ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಸೈನಿಕರ ನಿಯೋಜನೆ ಮತ್ತು ಕಾರ್ಯತಂತ್ರದ ಬಗ್ಗೆ ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪಂಜಾಬ್‌ನಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಗಿರುವ ನಷ್ಟಕ್ಕಿಂತ, ಫಲಿತಾಂಶ ಮುಖ್ಯ; ಆಪರೇಷನ್ ಸಿಂಧೂರ್ ಬಗ್ಗೆ ಸಿಡಿಎಸ್ ಅನಿಲ್ ಚೌಹಾಣ್ ಮಾತು
ಪಂಜಾಬ್ನ ತರಣ್‌ನ ಮೊಹಲ್ಲಾ ನಿವಾಸಿ ಗಗನ್‌ದೀಪ್ ಸಿಂಗ್ ಅಲಿಯಾಸ್ ಗಗನ್ ಬಂಧಿತ ಆರೋಪಿ. ಈತ ಪಾಕಿಸ್ತಾನ ಮೂಲದ ಖಲಿಸ್ತಾನ್ ಪರ ನಾಯಕ ಗೋಪಾಲ್ ಸಿಂಗ್ ಚಾವ್ಲಾ ಸಂಪರ್ಕದಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ:ತಂದೆಯಾದ ಖುಷಿಯಲ್ಲಿದ್ದ ಫಿಲ್ಸಾಲ್ಟ್ ತಂಡಕ್ಕೆ ವಾಪಾಸ್; ನಿಟ್ಟುಸಿರು ಬಿಟ್ಟ RCB ಫ್ಯಾನ್ಸ್
ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳ ಜೊತೆ ಆರೋಪಿ ಗಗನ್ ಮಾಹಿತಿ ಹಂಚಿಕೊಂಡಿದ್ದು. ಆತನ ಮೊಬೈಲ್ ಪೋನ್ನ್ನು ವಶಕ್ಕೆ ಪಡೆದಿದ್ದಾರೆ. ಗಗನ್ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಲು ಪಿಐಒಗಳ ಜೊತೆ ಹಣ ಹಾಕಿಸಿಕೊಂಡಿದ್ದಾನೆ. ಆತನ ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಐಎಸ್‌ಐ ಸಂಪರ್ಕಗಳ ವಿವರಗಳು ಪತ್ತೆಯಾಗಿವೆ. ಈ ಸಂಬಂಧ ತರಣ್ ತರಣ್ ನಗರದ ಪೊಲೀಸ್ ಠಾಣೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ‘ತಾಳ್ಮೆಯ ಫಲ ಸಿಹಿಯಾಗಿರುತ್ತೆ’ ; ಫೈನಲ್ ಪಂದ್ಯಕ್ಕೂ ಮುನ್ನ RCBಗೆ ಶುಭಕೋರಿದ ಸಿಎಂ ಸಿದ್ದರಾಮಯ್ಯ