Site icon PowerTV

ಸತ್ತ ವ್ಯಕ್ತಿಗೆ ಮರುಜೀವ ನೀಡಿದ ರಸ್ತೆ ಗುಂಡಿ; ವೈದ್ಯಲೋಕವನ್ನೇ ಅಚ್ಚರಿಗೀಡು ಮಾಡಿದೆ ಈ ಘಟನೆ

ಹರಿಯಾಣ: ರಸ್ತೆ ಗುಂಡಿಯಿಂದ ಸತ್ತ ವ್ಯಕ್ತಿಯೊಬ್ಬ ಬದುಕಿ ಬಂದಿರುವ ಘಟನೆ ಹರಿಯಾಣದಲ್ಲಿ ನಡೆದಿದ್ದು. ದರ್ಶನ್ ಸಿಂಗ್ ಬ್ರಾರ್ ಎಂಬ 80 ವರ್ಷದ ವೃದ್ದ ಬದುಕಿ ಜೀವ ಪಡೆದು ಬಂದಿದ್ದಾನೆ. ಕೇಳುವುದಕ್ಕೆ ಈ ಸುದ್ದಿ ಅಚ್ಚರಿಯಾದರು ಈ ಘಟನೆ ಸತ್ಯವಾಗಿದೆ.

ಹರಿಯಾಣದ ಕರ್ನಾಲ್ ಬಳಿಯ ನಿಸಿಂಗ್‌ನ, ದರ್ಶನ್ ಸಿಂಗ್ ಬ್ರಾರ್ ಎಂಬ 80 ವರ್ಷದ ವ್ಯಕ್ತಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಪಟಿಯಾಲದ ವೈದ್ಯರು ನಾಲ್ಕು ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಇಟ್ಟಿದ್ದರು. ಆದರೆ ಅವರು ಆರೋಗ್ಯ ಚೇತರಿಕೆಯಾಗದೆ ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದರು. ಬಳಿಕ ಅವರ ಮೊಮ್ಮಗ ಬಲ್ವಾನ್ ಸಿಂಗ್, ತಾತ ತೀರಿಕೊಂಡಿದ್ದಾರೆ ಎಂದು ಪಟಿಯಾಲದಲ್ಲಿರುವ ತನ್ನ ಸಹೋದರನಿಗೂ ಬೆಳಿಗ್ಗೆ 9 ಗಂಟೆಗೆ ತಿಳಿಸಿದರು. ಮನೆಯಲ್ಲಿ ಅಂತ್ಯ ಸಂಸ್ಕಾರಕ್ಕೂ ಸಿದ್ದತೆ ಆರಂಭಿಸಲಾಗಿತ್ತು.

ಇದನ್ನೂ ಓದಿ :ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್​ ಪಲ್ಟಿ; ಚಾಲಕನಿಗೆ ಸಹಾಯ ಮಾಡದೆ ಎಣ್ಣೆ ತುಂಬಿಕೊಂಡ ಜನ

ಕುಟುಂಬಸ್ಥರು ಬ್ರಾರ್ ಅವರ ಪಾರ್ಥಿವ ದೇಹವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯ ಹರಿಯಾಣದ ಕೈತಾಲ್ ಜಿಲ್ಲೆಯ ಧಂಡ್ ಗ್ರಾಮದ ಬಳಿ ಆಂಬುಲೆನ್ಸ್ ರಸ್ತೆಯ ಗುಂಡಿಗೆ ಬಡಿಯಿತು. ಆ್ಯಂಬುಲನ್ಸ್​ ಗುಂಡಿಗೆ ಬಿದ್ದ ರಭಸಕ್ಕೆ ಮೃತ ದರ್ಶನ್​ ಸಿಂಗ್​ ಅವರ ಕೈ ಚಲಿಸಿದೆ. ಈ ವೇಳೆ ಇದನ್ನು ಗಮನಿಸಿದ ಅವರ ಮೊಮ್ಮಗ ಮೃತ ತಾತನ ಹೃದಯ ಬಡಿತವನ್ನು ಪರೀಕ್ಷಿಸಿದ್ದು. ಈ ವೇಳೆ ಹೃದಯ ಬಡಿದುಕೊಳ್ಳುತ್ತಿರುವು ಗಮನಿಸಿದ ಮೊಮ್ಮಗ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಇದನ್ನೂ ಓದಿ :ಪಾಕ್​ ಗುಪ್ತಚರ ಅಧಿಕಾರಿಗಳ ಜೊತೆ ಸೇನೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ದೇಶದ್ರೋಹಿ ಅರೆಸ್ಟ್

ಇನ್ನು ಆಸ್ಪತ್ರೆಯಲ್ಲಿ ವೈದ್ಯರಯ ವೃದ್ದ ಬದುಕಿರುವುದುನ್ನು ಖಚಿತಪಡಿಸಿದ್ದು. ಅವರನ್ನು ಕರ್ನಾಲ್‌ನ ಎನ್‌ಪಿ ರಾವಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ರಾವಲ್ ಆಸ್ಪತ್ರೆಯ ಡಾಕ್ಟರ್ ನೇತ್ರಪಾಲ್ ಖಾಸಗಿ ಮಾಧ್ಯಮಕ್ಕೆ ನೀಡಿದ ಮಾಹಿತಿಯ ಪ್ರಕಾರ, ಅವರು ಸತ್ತಿದ್ದರೆಂದು ಹೇಳಲು ಸಾಧ್ಯವಾಗುವುದಿಲ್ಲ. ಅವರನ್ನು ನಮ್ಮ ಬಳಿಗೆ ಕರೆತಂದಾಗ, ಅವರು ಉಸಿರಾಡುತ್ತಿದ್ದರು. ರಕ್ತದೊತ್ತಡ ಮತ್ತು ನಾಡಿಮಿಡಿತ ಸಹ ಇತ್ತು. ಅವರಿಗೆ ಎದೆಯಲ್ಲಿ ಸೋಂಕು ಇರುವುದರಿಂದ ಉಸಿರಾಟ ಕಷ್ಟವಾಗುತ್ತಿದೆ. ಅವರು ಇನ್ನೂ ಐಸಿಯುನಲ್ಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ :RCB ನನ್ನ ನೆಚ್ಚಿನ ತಂಡ; ಫೈನಲ್​ಗೂ ಮುನ್ನ ಆರ್​ಸಿಬಿಗೆ ಬೆಂಬಲ ಘೋಷಿಸಿದ ರಿಷಿ ಸುನಕ್​

ಈ ಘಟನೆಯನ್ನು ಕುಟುಂಬದವರು ದೇವರ ಪವಾಡ ಎಂದು ಕರೆಯುತ್ತಿದ್ದಾರೆ. “ಇದು ಒಂದು ಪವಾಡ. ಅವರ ಸಾವಿಗೆ ಸಂತಾಪ ಸೂಚಿಸಲು ಬಂದವರೆಲ್ಲರೂ ನಮಗೆ ಅಭಿನಂದನೆ ಸಲ್ಲಿಸಿದರು. ದೇವರ ದಯೆಯಿಂದ ಅವರು ಈಗ ಉಸಿರಾಡುತ್ತಿದ್ದಾರೆ ದೇವರು ನಮ್ಮ ತಾತನಿಗೆ ಎರಡನೇ ಜೀವನ ಕೊಟ್ಟಿದ್ದಾನೆ” ಎಂದು ಮೊಮ್ಮಗ ಬಲ್ವಾನ್ ಹೇಳಿದ್ದಾರೆ.

Exit mobile version