Site icon PowerTV

RCB ನನ್ನ ನೆಚ್ಚಿನ ತಂಡ; ಫೈನಲ್​ಗೂ ಮುನ್ನ ಆರ್​ಸಿಬಿಗೆ ಬೆಂಬಲ ಘೋಷಿಸಿದ ರಿಷಿ ಸುನಕ್​

ಲಂಡನ್: ಬ್ರಿಟನ್‌ ಮಾಜಿ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್‌ ಅವರು ಪಂಜಾಬ್‌ ಕಿಂಗ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ ತಂಡಕ್ಕೆ ಬೆಂಬಲ ಘೋಷಿಸಿದ್ದಾರೆ. ಖಾಸಗಿ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ರಿಷಿ ಸುನಕ್​ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಪಾಕ್​ ಗುಪ್ತಚರ ಅಧಿಕಾರಿಗಳ ಜೊತೆ ಸೇನೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ದೇಶದ್ರೋಹಿ ಅರೆಸ್ಟ್

ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ರಿಷಿ ಸುನಕ್​ ‘ಆರ್‌ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು. ನಾನು ಬೆಂಗಳೂರಿನ ಕುಟುಂಬದೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾದಾಗ ಅತ್ತೆ-ಮಾವ ಆರ್​ಸಿಬಿ ಜರ್ಸಿಯನ್ನು ಗಿಫ್ಟ್​ ಆಗಿ ನೀಡಿದ್ದರು ಎಂದು ರಿಷಿ ಸುನಕ್​ ಹೇಳಿದ್ದಾರೆ.

ಅಂದಿನಿಂದಲೂ ಆರ್​ಸಿಬಿ ತಂಡವನ್ನು ಅನುಸರಿಸುತ್ತಿರುವುದಾಗಿ ರಿಷಿ ಸುನಕ್​ ಹೇಳಿಕೊಂಡಿದ್ದು. ಬಹಳ ಹಿಂದಿನಿಂದಲೂ ಆರ್​ಸಿಬಿ ಪಂದ್ಯಗಳನ್ನು ನೋಡುತ್ತಿದ್ದೇವೆ. ಕಛೇರಿಯಲ್ಲಿರುವಾಗಲೂ ಸಹ ಮ್ಯಾಚ್​​ ನೋಡುತ್ತೇನೆ. ಆರ್​ಸಿಬಿ ತಂಡವನ್ನು ಹುರಿದುಂಬಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಗಿರುವ ನಷ್ಟಕ್ಕಿಂತ, ಫಲಿತಾಂಶ ಮುಖ್ಯ; ಆಪರೇಷನ್​ ಸಿಂಧೂರ್​ ಬಗ್ಗೆ ಸಿಡಿಎಸ್​ ಅನಿಲ್​ ಚೌಹಾಣ್​ ಮಾತು

ವಿರಾಟ್​ ಕೊಹ್ಲಿ ಬಗ್ಗೆ ಸುನಕ್​ ಮಾತು..!

ಸತತ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಸಲು ಎದುರು ನೋಡುತ್ತಿರುವ ಸಂದರ್ಭದಲ್ಲಿ, ಸುನಕ್ ತಂಡದ ಬಗ್ಗೆ ಅದರಲ್ಲೂ ವಿಶೇಷವಾಗಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ನೀಡಿದ್ದ ಕೊಹ್ಲಿ ಸಹಿ ಮಾಡಿದ್ದ ಬ್ಯಾಟ್‌ ಹಿಡಿದು ‘ಕೊಹ್ಲಿ ಅವರೊಬ್ಬ ಲೆಜೆಂಡ್’ ಎಂದು ಹೇಳಿದ್ದರು. ಇದನ್ನೂ ಓದಿ: ‘ತಾಳ್ಮೆಯ ಫಲ ಸಿಹಿಯಾಗಿರುತ್ತೆ’ ; ಫೈನಲ್​ ಪಂದ್ಯಕ್ಕೂ ಮುನ್ನ RCBಗೆ ಶುಭಕೋರಿದ ಸಿಎಂ ಸಿದ್ದರಾಮಯ್ಯ

ಸುನಕ್‌, ಆರ್‌ಸಿಬಿ ತಂಡದ ಇಂಗ್ಲಿಷ್ ಆಟಗಾರರು ಕೂಡ ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಫೈನಲ್‌ನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಆಶಿಸಿದ್ದಾರೆ.

Exit mobile version