ಗುಜರಾತ್: ಐಪಿಎಲ್ 2025ರ ಪಂದ್ಯಾವಳಿ ಕೊನೆ ಹಂತಕ್ಕೆ ಬಂದು ತಲುಪಿದೆ. 9 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಫೈನಲ್ ಆಡಲು ಸಿದ್ಧವಾಗಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಆರ್ಸಿಬಿಗೆ ಫೈನಲ್ ಪಂದ್ಯಕ್ಕೂ ಮುನ್ನ ಸ್ಪೋಟಕ ಬ್ಯಾಟ್ಸಮನ್ ಫಿಲ್ ಸಾಲ್ಟ್ ತಂಡ ತೊರೆದು ಮನೆಗೆ ವಾಪಸಾಗಿದ್ದರು. ಇದೀಗ ಅವರು ಮರಳಿ ತಂಡ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ :‘ತಾಳ್ಮೆಯ ಫಲ ಸಿಹಿಯಾಗಿರುತ್ತೆ’ ; ಫೈನಲ್ ಪಂದ್ಯಕ್ಕೂ ಮುನ್ನ RCBಗೆ ಶುಭಕೋರಿದ ಸಿಎಂ ಸಿದ್ದರಾಮಯ್ಯ
ತಂದೆಯಾದ ಖುಷಿಯಲ್ಲಿರುವ ಆರಂಭಿಕ ಆಟಗಾರ ಫಿಲ್ ಸಾಲ್ಟ್ ತಂಡವನ್ನ ತೊರೆದು ಮನೆಗೆ ವಾಪಾಸಾಗಿದ್ದರು. ಆದರೆ ಅವರು ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ತಂಡ ಸೇರ್ಪಡೆಯಾಗಿದ್ದಾರೆ. ಇಎಸ್‌ಪಿಎನ್(ESPN) ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಸಾಲ್ಟ್ ತಮ್ಮ ಮೊದಲ ಮಗುವಿನ ಜನನಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಹೀಗಾಗಿ ಅವರು ಆರ್‌ಸಿಬಿ ಪಾಳಯದಿಂದ ಕಾಣಿಸಿಕೊಂಡಿರಲಿಲ್ಲ.
ಆದರೆ ಇಂದು ಬೆಳಿಗ್ಗೆ ಸಾಲ್ಟ್ ಅಹಮದಾಬಾದ್‌ಗೆ ಬಂದಿಳಿದಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಮೇ 29 ರಂದು ನಡೆದಿದ್ದ ಕ್ವಾಲಿಫೈಯರ್ -1 ರಲ್ಲಿ ತಂಡದ ಪರ ಆಡಿದ್ದ ಸಾಲ್ಟ್, ಪಂದ್ಯ ಮುಗಿದ ನಂತರ ತಮ್ಮ ದೇಶಕ್ಕೆ ಮರಳಿದ್ದರು. ಹೀಗಾಗಿ ಆರ್‌ಸಿಬಿಯ ತರಬೇತಿ ಸೆಷನ್ನಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳಲ್ಲಿ ಕಳವಳವನ್ನು ಉಂಟುಮಾಡಿತ್ತು. ಆದರೆ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿರುವ ಸುದ್ದಿ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ :ಥಗ್ಲೈಫ್ ಸಿನಿಮಾ ಬಿಡುಗಡೆ ಮುಂದೂಡಿಕೆ; ಕಮಲ್ ಹಾಸನ್ಗೆ ಮುಖಭಂಗ..!
ಟೀಮ್ ಡೇವಿಡ್ ಆಡುವುದು ಡೌಟ್..!
ಸ್ನಾಯುಸೆಳೆತಕ್ಕೆ ಒಳಗಾಗಿರುವ ಟಿಮ್ ಡೇವಿಡ್ ಲಕ್ನೋ ಮತ್ತು ಪಂಜಾಬ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಿಂದ ಹೊರ ಉಳಿದಿದ್ದರು. ಈ ಬಗ್ಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. ಇದನ್ನೂ ಓದಿ :ಅಪ್ರಾಪ್ತ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ
ಈ ಪ್ರಶ್ನೆಗೆ ಪಾಟಿದಾರ್, ಇಲ್ಲಿಯವರೆಗೆ ಟಿಮ್ ಡೇವಿಡ್ ಬಗ್ಗೆ ನನಗ್ಯಾವ ಐಡಿಯಾವೂ ಇಲ್ಲ. ಡಾಕ್ಟರ್ ಈ ಬಗ್ಗೆ ನಿಗಾ ಇರಿಸಿದ್ದಾರೆ. ವೈದ್ಯರು ಸಂಜೆ ನಮಗೆ ಮಾಹಿತಿ ನೀಡಲಿದ್ದಾರೆ ಎಂದು ಉತ್ತರಿಸಿದರು. ವೈದ್ಯರು ಅನುಮತಿ ನೀಡಿದರೆ ಡೇವಿಡ್ ಆರ್‌ಸಿಬಿಯ ಪ್ಲೇಯಿಂಗ್ 11 ಸೇರಲಿದ್ದಾರೆ ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.