Site icon PowerTV

ರೈತರ ಕಣ್ಣೀರಗೆ ಕಾರಣವಾದ ಈರುಳ್ಳಿ; ಬೆಲೆ ಕುಸಿತದಿಂದ ಕಂಗಾಲಾದ ಅನ್ನದಾತ

ವಿಜಯಪುರ: ಈರುಳ್ಳಿ ದರ ಕುಸಿತ ಹಿನ್ನಲೆ ರೈತನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ಹೊರಳಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈರುಳ್ಳಿ ಬೆಲೆ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕುಸಿತ ಕಾಣುತ್ತಿದೆ. ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ಕಣ್ಣೀರು ಸುರಿಸುತ್ತಿದ್ದು. ಸರ್ಕಾರ ಮತ್ತು ದಲ್ಲಾಳಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ವಿಜಯಪುರ ಜಿಲ್ಲೆಯ, ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ರೈತ ನಂದಪ್ಪ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿ ಗೋಳಾಡಿದ್ದಾರೆ. ಇದನ್ನೂ ಓದಿ :ಫಿನಾಲೆಯಲ್ಲಿ ಸೋಲನ್ನೇ ಕಾಣದ ಹ್ಯಾಜಲ್​ವುಡ್​; ಸತತ 6ನೇ ಕಪ್​ ಗೆಲ್ಲುವ ತವಕದಲ್ಲಿ ಶ್ರೇಯಸ್|​ ಅದೃಷ್ಟಶಾಲಿ ಆಟಗಾರರ ಕದನ

ರೈತರಾದ ನಂದಪ್ಪ ಗುಡ್ಡದ, ಮಲ್ಲಿಕಾರ್ಜುನ ಗೋಲಗೊಂಡ ಎಂಬವರಿಗೆ ಈರುಳ್ಳಿ ಸೇರಿದ್ದು, ಕ್ವಿಂಟಾಲ್‌ಗೆ 250 ರೂ. ದರ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಮಾಡಿದ್ದಾರೆ. ಈ ವೇಳೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ :ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಹರಿದ ಲಾರಿ; ಅಜ್ಜಿಯ ಕಣ್ಣೆದುರೆ ಸಾವನ್ನಪ್ಪಿದ ಬಾಲಕ

Exit mobile version