Site icon PowerTV

‘ಕ್ಷಮೆ ಕೇಳದಿದ್ದರೆ, ಸಿನಿಮಾ ಯಾಕ್​ ರಿಲೀಸ್​ ಮಾಡ್ತೀರಾ’; ಕಮಲ್​ಗೆ ಹಾಸನ್​ಗೆ ಹೈಕೋರ್ಟ್ ತರಾಟೆ

ಬೆಂಗಳೂರು : ನಟ ಕಮಲ್​ ಹಾಸನ್​ ಹುಟ್ಟಿಹಾಕಿರುವ ಭಾಷಾ ವಿವಾದ ಇದೀಗ ಹೈಕೋರ್ಟ್​ ಮೆಟ್ಟಿಲೇರಿದ್ದ. ನ್ಯಾಯಾಧೀಶ ನಾಗಪ್ರಸನ್ನರ ಪೀಠ ನಟನನ್ನು ತರಾಟೆಗೆ ತೆಗೆದುಕೊಂಡಿದೆ. ‘ಕ್ಷಮೆ ಕೇಳದಿದ್ದರೆ, ಕರ್ನಾಟಕದಲ್ಲಿ ಸಿನಿಮಾ ಯಾಕೆ ಬಿಡುಗಡೆ ಮಾಡಬೇಕು ಎಂದು ಪ್ರಶ್ನಿಸಿದ್ದು. ಅರ್ಜಿ ವಿಚಾರನೆಯನ್ನು ಮಧ್ಯಾಹ್ನ 2.30 ಗಂಟೆಗೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:ರೈತರ ಕಣ್ಣೀರಗೆ ಕಾರಣವಾದ ಈರುಳ್ಳಿ; ಬೆಲೆ ಕುಸಿತದಿಂದ ಕಂಗಲಾದ ಅನ್ನದಾತ

ಥಗ್​ಲೈಫ್​ ಸಿನಿಮಾ ಪ್ರಚಾರದಲ್ಲಿದ್ದ ನಟ ಕಮಲ್​ ಹಾಸನ್​ ‘ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ವಿವಾದ ಸೃಷ್ಷಿಸಿದ್ದರು. ಇದಕ್ಕೆ ಕನ್ನಡ ಪರ ಸಂಘಟನೆಗಳು, ನಟ-ನಟಿಯರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು. ಕಮಲ್​ ಸಿನಿಮಾ ಬಿಡುಗಡೆ ಮಾಡದಂತೆ ಫಿಲಂ ಛೇಂಬರ್​ಗೆ ಒತ್ತಾಯಿಸಿದರು. ಇದರ ನಡುವೆ ನಟ ಕಮಲ್​ ಹಾಸನ್​ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಟನನ್ನು ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್​ ಪ್ರಶ್ನೆಯೇನು..!

ಕಮಲ್ ಹಾಸನ್ ಪರ ವಕೀಲರಿಗೆ ನ್ಯಾಯಾಧೀಶ ನಾಗಪ್ರಸನ್ನರ ಪೀಠ ಅನೇಕ ಪ್ರಶ್ನೆಗಳನ್ನ ಕೇಳಿದ್ದು “ಕ್ಷಮೆ ಕೇಳಿದ್ರೆ ಕಮಲ್ ಹಾಸನ್‌ ಏನು ಕಳೆದುಕೊಳ್ತಾರೆ? ಕಮಲ್ ಹಾಸನ್‌ ಏನು ಭಾಷಾ ತಜ್ಞರಾ. ಜನ, ನೆಲ, ಭಾಷೆ ಒಂದು ಭಾವನೆಯಾಗಿರುತ್ತದೆ. ಜನರ ಭಾವನೆಗಳಿಗೆ ಧಕ್ಕೆ ಆಗುವಂತೆ ನಡೆದುಕೊಳ್ಳಬಾರದು. ಭಾಷೆ ಹುಟ್ಟಿದ್ದರ ಬಗ್ಗೆ ಮಾತನಾಡಲು ನೀವು ಇತಿಹಾಸಕಾರರಾ? ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನಲು ನೀವು ಇತಿಹಾಸ ತಜ್ಞರಾ? ಇದನ್ನೂ ಓದಿ:ಫಿನಾಲೆಯಲ್ಲಿ ಸೋಲನ್ನೇ ಕಾಣದ ಹ್ಯಾಜಲ್​ವುಡ್​; ಸತತ 6ನೇ ಕಪ್​ ಗೆಲ್ಲುವ ತವಕದಲ್ಲಿ ಶ್ರೇಯಸ್|​ ಅದೃಷ್ಟಶಾಲಿ ಆಟಗಾರರ ಕದನ

ನೀವೊಬ್ಬ ಸೆಲಬ್ರೆಟಿಯಾಗಿ ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ಕೊಡಬೇಡಿ. ನಿಮ್ಮಿಂದಾಗಿ ಶಿವರಾಜ್‌ಕುಮಾರ್ ತೊಂದರೆ ಅನುಭವಿಸುವಂತಾಗಿದೆ. ‘ಸರಾಗವಾಗಿ ನಡೆಯಬೇಕೆಂದರೆ ಕ್ಷಮೆ ಕೇಳಿ’
ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ? ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆಗೆ ಧಕ್ಕೆ ಆಗಬಾರದು
ಕ್ಷಮೆ ಕೋರಿದ ಮೇಲೆ ಅರ್ಜಿ ಪರಿಗಣಿಸಲಾಗುವುದು. ಕಮಲ್ ಹಾಸನ್ ಮೊದಲು ಕ್ಷಮೆ ಕೇಳಲಿ
ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಕ್ಷಮೆ ಕೇಳದಿದ್ದರೆ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಯಾಕೆ..!

ಸಿನಿಮಾ ಬಿಡುಗಡೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಲಯ ‘ಸುಗಮವಾಗಿ ನಿಮ್ಮ ಚಿತ್ರ ಪ್ರದರ್ಶನ ಆಗಬೇಕು ಎಂದು ಬಯಸುತ್ತೀರಿ. ಆದರೆ ನೀವು ಜನರ ಭಾವನೆಗೆ ಧಕ್ಕೆ ತರುವ ಮಾತನಾಡಿದ್ದೀರಿ. ನಿಮ್ಮ ಒಂದು ಹೇಳಿಕೆಯಿಂದ ಇಡೀ ರಾಜ್ಯದ ಜನರ ಭಾವನೆಗೆ ಧಕ್ಕೆಯಾಗಿದೆ. ಜನರ ಭಾವನೆಗೆ ಧಕ್ಕೆ ತಂದು ಸಿನಿಮಾ ರಿಲೀಸ್ ಮಾಡಲು ಬಯಸುತ್ತೀರಾ? ಇದನ್ನೂ ಓದಿ:‘ಲಕ್ಷಾಂತರ ಜನರ ಕನಸನ್ನ ನನಸು ಮಾಡಿ’; RCB ಜರ್ಸಿ ತೊಟ್ಟು ವಿಶ್​ ಮಾಡಿದ ಡಿಕೆಶಿ

ಕ್ಷಮೆ ಕೇಳದಿದ್ದರೆ ಕರ್ನಾಟಕ ಬಿಟ್ಟು ಬೇರೆಡೆ ಸಿನಿಮಾ ರಿಲೀಸ್ ಮಾಡಿ. ಕ್ಷಮೆ ಕೇಳೋದಿಲ್ಲ ಅಂದ್ರೆ ನಿಮಗೆ ಕರ್ನಾಟಕ ಯಾಕೆ ಬೇಕು? ಕರ್ನಾಟಕ ಬಿಟ್ಟು ಉಳಿದೆಡೆ ಸಿನಿಮಾ ರಿಲೀಸ್ ಮಾಡಿಕೊಳ್ಳಿ. ನಾನು ಕೂಡ ಥಗ್​ಲೈಫ್​ ಸಿನಿಮಾ ನೋಡಬೇಕು ಅಂತಿದ್ದೆ. ಆದರೆ ಈಗ ಆಗಲ್ಲ ಎಂದು ನ್ಯಾಯಾಧೀಶರು ಕಮಲ್​ ಹಾಸನ್​ರನ್ನು ತರಾಟೆಗೆ ತೆಗೆದುಕೊಂಡಿದ್ದು. ಮುಂದಿನ ವಿಚಾರಣೆಯನ್ನು ಮಧ್ಯಹ್ನಾ 2.30 ಗಂಟೆಗೆ ಮುಂದೂಡಿ ಆದೇಶ ಹೊರಡಿಸಿದೆ.

 

Exit mobile version