Site icon PowerTV

ವನ್ಯಜೀವಿಗಳ ಕಾಳಜಿಗಾಗಿ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ; ಅನಿಲ್​ ಕುಂಬ್ಳೆ

ಬೆಂಗಳೂರು : ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಿದ್ದು. ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನಿವಾಸಕ್ಕೆ ಭೇಟ ನೀಡಿದ ಅನಿಲ್​ ಕುಂಬ್ಳೆ ಸಚಿವರಿಂದ ಅಪಾಯಿಂಟ್ಮೆಂಟ್​ ಲೆಟರ್​ ಪಡೆದಿದ್ದಾರೆ.

ಇಂದು ಬೆಳಿಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅನಿಲ್​ ಕುಂಬ್ಳೆ “ಸರ್ಕಾರ ನನಗೆ ಒಂದು‌ ಅವಕಾಶ ಕೊಟ್ಟಿದೆ. ರಘುನಂದನ್ ಜವಾಬ್ದಾರಿ ಕೊಟ್ಟಿದ್ದಾರೆ, ಇದಕ್ಕೂ ಮುಂಚೆಯೂ ವನ್ಯಜೀವಿ ಮಂಡಳಿ ಉಪಾಧ್ಯಕ್ಷನಾಗಿದ್ದೆ. ಸಿಎಂ, ಡಿಸಿಎಂ, ಖಂಡ್ರೆ ಅವಕಾಶ ಕೊಟ್ಟಿದ್ದಾರೆ ಅದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇದನ್ನೂ ಓದಿ :ಡಾಕ್ಟರೇಟ್​ ಪದವಿ ತಿರಸ್ಕರಿಸಿದ ಸಚಿವ ಸತೀಶ್​ ಜಾರಕಿಹೊಳಿ

ವನ್ಯಜೀವಿಗಳ ಮೇಲೆ ನನಗೆ ಕಾಳಜಿ ಇದೆ. ವನ್ಯಜೀವಿಗಳಿಗಾಗಿ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಅನಿಲ್​ ಕುಂಬ್ಳೆ ಹೇಳಿದರು.

ಆರ್​ಸಿಬಿ ಕಪ್ ಗೆಲ್ಲುತ್ತೆ ಅಂತ ಈಗಲೇ ಹೇಳಬೇಡಿ..!

ಗುಜರಾತ್​ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇಂದು ಆರ್​ಸಿಬಿ ಮತ್ತು ಪಂಜಾಬ್​ ತಂಡಗಳು ಸೆಣಸಾಡುತ್ತಿದ್ದು. ಈ ಕುರಿತು ಮಾತನಾಡಿದ ಅನಿಲ್ ಕುಂಬ್ಳೆ ” ಆರ್​ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ :‘ಕ್ಷಮೆ ಕೇಳದಿದ್ದರೆ, ಸಿನಿಮಾ ಯಾಕ್​ ರಿಲೀಸ್​ ಮಾಡ್ತೀರಾ’; ಕಮಲ್​ಗೆ ಹಾಸನ್​ಗೆ ಹೈಕೋರ್ಟ್ ತರಾಟೆ

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್​​ಸಿಬಿ ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು. ಹಾಗೆಯೇ ಆಗಲಿ ಎಂದು ಹಾರೈಸೋಣ ಎಂದರು. ಪಂಜಾಬ್​ ತಂಡದಲ್ಲೂ ನಾನು ಆಡಿದ್ದೆ. ಆರ್​​ಸಿಬಿಯಲ್ಲೂ ಆಡಿದ್ದೆ. ಎರಡೂ ತಂಡಗಳು ಬೆಸ್ಟ್. ಉತ್ತಮ ಪ್ರದರ್ಶನ ನೀಡಿದ ತಂಡಗಳೇ ಫೈನಲ್​ ಪ್ರವೇಶಿಸಿವೆ. ಆರ್​ಸಿಬಿ ಗೆಲ್ಲಲಿ ಎಂಬುದು ಹಾರೈಕೆ ಎಂದು ಹೇಳಿದರು.

Exit mobile version