Site icon PowerTV

ಥಗ್​ಲೈಫ್​ ಸಿನಿಮಾ ಬಿಡುಗಡೆ ಮುಂದೂಡಿಕೆ​; ಕಮಲ್​ ಹಾಸನ್​ಗೆ ಮುಖಭಂಗ..!

ಬೆಂಗಳೂರು: ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ವಿವಾದತ್ಮಕ ಹೇಳಿಕೆ ಈಗ ಹೈಕೋರ್ಟ್​ ಮೆಟ್ಟಿಲೇರಿದ್ದು. ರಾಜ್ಯ ಹೈಕೋರ್ಟ್​ ಥಗ್​ಲೈಫ್​ ಸಿನಿಮಾಗೆ ಒಂದು ವಾರ ತಡೆ ನೀಡಿ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಜೂನ್​.10ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ :‘ಕ್ಷಮೆ ಕೇಳದಿದ್ದರೆ, ಸಿನಿಮಾ ಯಾಕ್​ ರಿಲೀಸ್​ ಮಾಡ್ತೀರಾ’; ಕಮಲ್​ಗೆ ಹಾಸನ್​ಗೆ ಹೈಕೋರ್ಟ್ ತರಾಟೆ

ಹೈಕೋರ್ಟ್​ ನ್ಯಾಯಧೀಶ ಎಂ. ನಾಗಪ್ರಸನ್ನರ ಪೀಠ ಮಹತ್ವದ ಆದೇಶ ಹೊರಡಿಸಿದೆ. ಬೆಳಿಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ‘ಕಮಲ್ ಹೇಳಿಕೆಯಿಂದ ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟಾಗಿದೆ. ನೆಲೆ, ಜಲ, ಭಾಷೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಮಲ್ ಹಾಸನ್ ಕ್ಷಮೆಯಾಚನೆಯಿಂದ ಪರಿಸ್ಥಿತಿ ಬಗೆಹರಿಯುತ್ತಿತ್ತು. ಆದರೆ ಅವರು ಕ್ಷಮೆ ಕೇಳುತ್ತಿಲ್ಲ. ಈಗಿರುವಾಗ ಸಿನಿಮಾ ಬಿಡುಗಡೆಗೆ ಯಾಕೆ ಅವಕಾಶ ಕೊಡಬೇಕು ಎಂದು ಪ್ರಶ್ನಿಸಿದ್ದರು. ಅರ್ಜಿಯನ್ನು ಮಧ್ಯಹ್ನಾ 2:30ಕ್ಕೆ ಮುಂದೂಡಿದ್ದರು. ಇದನ್ನೂ ಓದಿ :ಅಪ್ರಾಪ್ತ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ

ಸಿನಿಮಾ ಬಿಡುಗಡೆಗೆ ಒಂದುವಾರ ತಡೆ..!

ಕಮಲ್​ ಹಾಸನ್​ ಪರ ವಕೀಲರು ವಿಚಾರಣೆಯನ್ನು ಒಂದು ವಾರ ಮುಂದೂಡುವಂತೆ ಮನವಿ ಮಾಡಿದ್ದು. ನ್ಯಾಯಾಲಯ ಜೂನ್​ 10ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಥಗ್​ ಲೈಫ್​ ಸಿನಿಮಾ ಇದೇ ಗುರುವಾರ (ಜೂ.05ಕ್ಕೆ) ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಕೂಡ ಈಗ ಒಂದು ವಾರ ಮುಂದೂಡಿಕೆಯಾಗಿದ್ದು. ಕ್ಷಮೆ ಕೇಳಲು ಧಿಮಾಕು ತೋರಿಸಿದ ಕಮಲ್​ ಹಾಸನ್​ಗೆ ನ್ಯಾಯಾಲಯ ಮಂಗಳಾರತಿ ಮಾಡಿದೆ.

Exit mobile version