Site icon PowerTV

ಫಿನಾಲೆಯಲ್ಲಿ ಸೋಲನ್ನೇ ಕಾಣದ ಹ್ಯಾಜಲ್​ವುಡ್​; ಸತತ 6ನೇ ಕಪ್​ ಗೆಲ್ಲುವ ತವಕದಲ್ಲಿ ಶ್ರೇಯಸ್|​ ಅದೃಷ್ಟಶಾಲಿ ಆಟಗಾರರ ಕದನ

ಬೆಂಗಳೂರು: ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಫಿನಾಲೆ ತಲುಪಿದ್ದು, ಪ್ರಥಮ ಭಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎರಡು ತಂಡಗಳು ಸಿದ್ದತೆ ನಡೆಸಿವೆ ಇದರ ನಡುವೆ ಆರ್​ಸಿಬಿ ತಂಡದ ಆಟಗಾರ ಜೋಶ್​ ಹೇಜಲ್​ವುಡ್​ ಮತ್ತು ಶ್ರೇಯಸ್​ ಐಯ್ಯರ್​ ಬಗ್ಗೆ ಚರ್ಚೆ ಆರಂಭವಾಗಿದ್ದು. ಜೋಶ್​ ಹೇಜಲ್​ವುಡ್ ಇಲ್ಲಿಯವರೆಗೆ  ಆಡಿರುವ ಯಾವುದೇ ಫೈನಲ್​ ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ, ಅದೇ ರೀತಿ ಶ್ರೇಯಸ್​ ಐಯ್ಯರ್​ ಕೂಡ ಕಳೆದ ಒಂದುವರೆ ವರ್ಷದಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತ ಬಂದಿದೆ. ಇದನ್ನೂ ಓದಿ :ಧೂಮವತೀ ದೇವಿ ಆರಾಧನೆಯಿಂದ ದೊರಕುವ ಫಲಗಳು ಮತ್ತು ಆರಾಧನೆಯ ವಿಧಾನಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ಇಂದು (ಜೂ.03) ಸಂಜೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ತಂಡಗಳು ಸೆಣಸಾಡಲಿವೆ. ಯಾವುದೇ ತಂಡ ಕಪ್​ ಗೆದ್ದರು ಹೊಸ ಇತಿಹಾಸ ನಿರ್ಮಾಣವಾಗಲಿದೆ. ಇದರ ನಡುವೆ ಆರ್​ಸಿಬಿ ಬೌಲರ್​ ಜೋಶ್​ ಹ್ಯಾಜಲ್​ವುಡ್​ ಮತ್ತು ಪಂಜಾಬ್​ ಕ್ಯಾಪ್ಟನ್​ ಶ್ರೇಯಸ್​ ಐಯ್ಯರ್​ ಬಗ್ಗೆ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ:ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಹರಿದ ಲಾರಿ; ಅಜ್ಜಿಯ ಕಣ್ಣೆದುರೆ ಸಾವನ್ನಪ್ಪಿದ ಬಾಲಕ

ಫೈನಲ್‌ನಲ್ಲಿ ಸೋಲು ಕಾಣದ ಜೋಶ್ ಹ್ಯಾಜಲ್‌ವುಡ್‌..!

ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಹ್ಯಾಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ.

2021 ರಲ್ಲಿ, ಹ್ಯಾಜಲ್‌ವುಡ್ ಸಿಡ್ನಿ ಸಿಕ್ಸರ್ಸ್‌ ಪರ ಚಾಂಪಿಯನ್ಸ್ ಲೀಗ್ ಟಿ20೦ ಫೈನಲ್‌ನಲ್ಲಿ ಆಡಿದ್ದರು. ಅವರ ತಂಡ ಗೆದ್ದಿತ್ತು. 2015 ರ ವಿಶ್ವಕಪ್ ಫೈನಲ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. 2020 ರ ಬಿಗ್ ಬ್ಯಾಷ್ ಲೀಗ್, 2021 ರ ಐಪಿಎಲ್ ಮತ್ತು 2021 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಕೂಡ ಇದ್ದರು. ಇದಲ್ಲದೆ, ಆಸ್ಟ್ರೇಲಿಯಾ 2023 ರ ವಿಶ್ವಕಪ್ ಗೆದ್ದಿತು. ಆ ಪಂದ್ಯದಲ್ಲಿ ಕೂಡ ಹ್ಯಾಜಲ್‌ವುಡ್ ಆಡಿದ್ದರು. ಇದನ್ನೂ ಓದಿ :ನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್​ ಮ್ಯಾನೇಜರ್​ ಬರ್ಬರ ಕೊ*ಲೆ

ಕಳೆದ ಒಂದುವರೆ ವರ್ಷದಿಂದ ಶ್ರೇಯಸ್​ ಮುಟ್ಟಿದ್ದೆಲ್ಲಾ ಚಿನ್ನ..!

ಪಂಜಾಬ್​ ಕಿಂಗ್ಸ್ ತಂಡದ​ ನಾಯಕ ಶ್ರೇಯಸ್​ ಐಯ್ಯರ್​ ಕಳೆದ ಒಂದುವರೆ ವರ್ಷದಿಂದ ಉತ್ತಮ ಲಯದಲ್ಲಿದ್ದು. ಕಳೆದ ಒಂದೂವರೆ ವರ್ಷದಿಂದ ಮುಟ್ಟಿದೆಲ್ಲವೂ ಚಿನ್ನವಾಗುತ್ತಿದೆ. ಅಷ್ಟೇ ಅಲ್ಲದೇ ಕಳೆದ ವರ್ಷ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದ್ದ ಕೆಕೆಆರ್​ ತಂಡದ ನಾಯಕನಾಗಿದ್ದ ಶ್ರೇಯಸ್​ ಐಯ್ಯರ್​ ಈ ಭಾರಿಯು ಕಪ್​ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ಇದನ್ನೂ ಓದಿ :IPLನಿಂದ ರಾಷ್ಟ್ರೀಯತೆ ಬರಲ್ಲ; RCBಗೆ ಶುಭ ಕೋರಲು ಸಿ,ಟಿ ರವಿ ನಕಾರಾ

2023ರ ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ತೋರಿ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದ ಶ್ರೇಯಸ್​ ಐಯ್ಯರ್​ ಕಳೆದ ವರ್ಷದ ದೇಶೀಯ ಕ್ರಿಕೆಟ್‌ನಲ್ಲಿ ಮುಂಬ ತಂಡವನ್ನು ತಂಡವನ್ನು ಪ್ರತಿನಿಧಿಸಿ ರಣಜಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ರಣಜಿಯ ಬೆನ್ನಲ್ಲೇ ಶ್ರೇಯಸ್‌ ನಾಯಕತ್ವದಲ್ಲಿ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದನ್ನೂ ಓದಿ:ಭಾರೀ ಮಳೆಗೆ ಸೇನಾ ಶಿಬಿರದ ಮೇಲೆ ಗುಡ್ಡ ಕುಸಿತ; ಮೂವರು ಸಾವು, 6 ಮಂದಿ ಕಣ್ಮರೆ

ಇರಾನಿ ಕಪ್ ಗೆದ್ದ ಮುಂಬೈ ತಂಡದ ಸದಸ್ಯರಾಗಿದ್ದ ಶ್ರೇಯಸ್‌ ಅಯ್ಯರ್‌ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಶ್ರೇಯಸ್ ತಂಡದ ಪ್ರಮುಖ ಭಾಗವಾಗಿದ್ದರು. ಇಷ್ಟೇ ಅಲ್ಲದೇ ಕಳೆದ ವರ್ಷ ಶ್ರೇಯಸ್‌ ನಾಯಕತ್ವದಲ್ಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಕಳೆದ 15 ತಿಂಗಳಿನಲ್ಲಿ 5 ಟ್ರೋಫಿ ಗೆದ್ದಿರುವ ಶ್ರೇಯಸ್‌ ಅಯ್ಯರ್‌ ಈಗ 6ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. ಇದರೊಂದಿಗೆ ಈ ಬಾರಿ ಒಟ್ಟು 16 ಪಂದ್ಯಗಳಿಂದ 603 ರನ್‌ ಹೊಡೆದಿರುವ ಶ್ರೇಯಸ್‌ ಅಯ್ಯರ್ ಸರಣಿ ಶ್ರೇಷ್ಠ ಪ್ರಶಸ್ತಿಯ ಮೇಲೂ ಕಣ್ಣಿಟ್ಟಿದ್ದಾರೆ.‌

Exit mobile version