ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿಯಾದ, ಜಗಜ್ಜನನಿಯಾದ, ಇಡೀ ಲೋಕವನ್ನು ಪಾಲಿಸುತ್ತಿರುವ, ಭಕ್ತರ ಸಂಕಷ್ಟಗಳನ್ನು ಪರಿಹರಿಸಲು ನಾನಾ ಅವತಾರಗಳನ್ನು ತಾಳಿ, ಭಕ್ತರನ್ನು ಉದ್ಧರಿಸುತ್ತಾ, ಲೋಕ ಕಲ್ಯಾಣವನ್ನು ಮಾಡುತ್ತಾ ಧರ್ಮಸಂರಕ್ಷಣೆಯನ್ನು ಮಾಡುತ್ತಿರುವ ದೇವಿ ಧೂಮವತಿಯು ಜೇಷ್ಠ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಧೂಮ್ರಾಸುರನನ್ನು ಸಂಹರಿಸಲು ಅವತಾರ ತಾಳಿದ ಶುಭದಿನ ಇಂತಹ ಜಗಜ್ಜನನಿಯಾದ ಧೂಮವತೀ ದೇವಿಯನ್ನು ತಾಂತ್ರಿಕರು) ದಶಮಹಾವಿದ್ಯೆಯಲ್ಲಿ ದಶಮಹಾರೂಪದಲ್ಲಿ ಆರಾಧಿಸುತ್ತಾ ಬರುತ್ತಿದ್ದಾರೆ. ಇಂತಹ ಅವತಾರ ರೂಪವಾಗಿರುವ ಧೂಮವತೀ ದೇವಿಯ ಜಯಂತಿಯನ್ನು ಈ ವರ್ಷದಲ್ಲಿ ಜೇಷ್ಠಮಾಸದ ಶುಕ್ಲಪಕ್ಷದ ಅಷ್ಟಮಿ ದಿನಾಂಕ 03-06-2025 ರ ಮಂಗಳವಾರದಂದು ಆಚರಣೆ ಮಾಡಬೇಕು.
1
2
3