Site icon PowerTV

ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್​ ಪಲ್ಟಿ; ಚಾಲಕನಿಗೆ ಸಹಾಯ ಮಾಡದೆ ಎಣ್ಣೆ ತುಂಬಿಕೊಂಡ ಜನ

ಅಮೇಥಿ: ಉತ್ತರ ಪ್ರದೇಶದ ಅಮೇಥಿಯ ವಾರಣಾಸಿ-ಲಕ್ನೋ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು. ಸ್ಥಳೀಯ ಜನರು ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕನಿಗೆ ಸಹಾಯ ಮಾಡದೆ ರಸ್ತೆಯಲ್ಲಿ ಬಿದ್ದಿದ್ದ ಎಣ್ಣೆ ಕದಿಯಲು ಮುಂದಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಎಣ್ಣೆ ತುಂಬಿಕೊಳ್ಳುತ್ತಿದ್ದ ಜನರನ್ನು ಸ್ಥಳದಿಂದ ಓಡಿಸಿ ಗಾಯಗೊಂಡ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ :RCB ನನ್ನ ನೆಚ್ಚಿನ ತಂಡ; ಫೈನಲ್​ಗೂ ಮುನ್ನ ಆರ್​ಸಿಬಿಗೆ ಬೆಂಬಲ ಘೋಷಿಸಿದ ರಿಷಿ ಸುನಕ್​

ಉತ್ತರ ಪ್ರದೇಶದ ವಾರಾಣಸಿ-ಲಕ್ನೋ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಆದರೆ, ಆತನ ಸಹಾಯಕ್ಕೆ ಬಾರದ ಸ್ಥಳೀಯ ಗ್ರಾಮಸ್ಥರು ಮನೆಗೆ ಓಡಿಹೋಗಿ, ಸಿಕ್ಕ ಪಾತ್ರೆ, ಬಕೆಟ್​ಗಳನ್ನೆಲ್ಲ ತಂದು ರಸ್ತೆಯಲ್ಲಿ ಚೆಲ್ಲಿದ್ದ ಎಣ್ಣೆಯನ್ನು ಲೂಟಿ ಮಾಡಿದ್ದಾರೆ. ಕೊನೆಗೆ ಪೊಲೀಸರೇ ಬಂದು ಗ್ರಾಮಸ್ಥರನ್ನು ಓಡಿಸಿ, ಟ್ಯಾಂಕರ್ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ :ಪಾಕ್​ ಗುಪ್ತಚರ ಅಧಿಕಾರಿಗಳ ಜೊತೆ ಸೇನೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ದೇಶದ್ರೋಹಿ ಅರೆಸ್ಟ್

ಗಾಯಗೊಂಡ ಟ್ಯಾಂಕರ್ ಚಾಲಕನನ್ನು ಬಾರಾಬಂಕಿಯ ಬಹದ್ದೂರ್‌ಪುರ ಹೈದರ್‌ಗಢ ಪ್ರದೇಶದ ನಿವಾಸಿ ರಾಮ್ ಮಿಲನ್ ಅವರ ಪುತ್ರ ರಾಮರಾಜ್ ಎಂದು ಗುರುತಿಸಲಾಗಿದ್ದು. ತೀವ್ರವಾಗಿ ಗಾಯಗೊಂಡಿದ್ದ ಚಾಲಕನನ್ನು ಜಗದೀಶ್​ ಪುರ ಟ್ರಾಮಾ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಡಾಕ್ಟರೇಟ್​ ಪದವಿ ತಿರಸ್ಕರಿಸಿದ ಸಚಿವ ಸತೀಶ್​ ಜಾರಕಿಹೊಳಿ

Exit mobile version