ಬೆಂಗಳೂರು: ಆಟೋ ಚಾಲಕನಿಗೆ ಹಿಂದಿ ಮಹಿಳೆ ಚಪ್ಪಲಿಯಿಂದ ಹೊಡೆದ ಪ್ರಕರಣದ ಕುರಿತು ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಬಿಹಾರ ಮೂಲದ ಮಹಿಳೆ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಬಿಹಾರಿ ಮೂಲದ ಪನ್ಪೂರಿ ಮಿಶ್ರಾ,(28) ಎಂಬ ಮಹಿಳೆ ಮತ್ತು ಆಕೆಯ ಪತಿ ಕ್ಷಮೆಯಾಚಿಸಿದ್ದಾರೆ.
ಮೇ.31ರಂದು ಸರಿ ಸುಮಾರು 4.30 ರ ಸುಮಾರಿಗೆ ಬೆಳ್ಳಂದೂರು ಸಿಗ್ನಲ್ ಬಳಿ ಬಿಹಾರ ಮೂಲದ ಮಹಿಳೆಯೊಬ್ಬಳು ದ್ವಿಚಕ್ರ ವಾಹನಕ್ಕೆ ಆಟೋ ಡಿಕ್ಕಿ ಹೊಡೆದಿದೆ ಅಂತ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದು ಹಲ್ಲೆ ಮಾಡಿದ್ದಳು. ಘಟನೆ ಸಂಬಂಧ ಮಹಿಳೆ ಮೇಲೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಸಂಬಂಧ ಬೆಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದೀಗ ಮಹಿಳೆ ಕ್ಷಮೆಯಾಚಿಸಿದ್ದಾಳೆ. ಇದನ್ನೂ ಓದಿ :ಪಹಲ್ಗಾಂ ಉಗ್ರರು ಬಿಜೆಪಿಗೆ ಸೇರಿದ್ದಾರೆ, ಬಿಜೆಪಿ ಈ ಕುರಿತು ಘೋಷಿಸಲಿದೆ; ಸಂಜಯ್ ರಾವುತ್
ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಬಿಹಾರ ಮೂಲದ ಮಹಿಳೆ ಹಾಗೂ ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ. ಆಟೋ ಚಾಲಕನ ಬಳಿ ಕ್ಷಮೆಯಾಚಿಸಿದ ದಂಪತಿ, ಎಲ್ಲಾ ಕನ್ನಡಿಗರು ನಮ್ಮನ್ನು ಕ್ಷಮಿಸಿ. ಆಟೋ ಚಾಲಕರ ಬಗ್ಗೆ ಗೌರವವಿದೆ. ಬೆಂಗಳೂರನ್ನು ಪ್ರೀತಿಸುತ್ತೇವೆ. ಇಲ್ಲಿನ ವಾತವರಣವನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ.