Site icon PowerTV

ಮಂಗಳೂರು ಕ್ಲಾಕ್​ ಟವರ್ ಮುಂಭಾಗ ಪೊಲೀಸರಿಂದ ಲಾಠಿ ಡ್ರಿಲ್​; ಗಲಭೆಕೋರರಿಗೆ ನೇರ ಎಚ್ಚರಿಕೆ

ಮಂಗಳೂರು: ಕರಾವಳಿಯಲ್ಲಿ ಕೋಮಿನ ಆಧಾರದ ಮೇಲೆ ಸರಣಿ ಹತ್ಯೆಗಳು ನಡೆಯುತ್ತಿರುವ ಹಿನ್ನಲೆ ಕಾರ್ಯಪ್ರವೃತ್ತರಾಗಿರುವ ಮಂಗಳೂರು ಪೊಲೀಸ್​ ಇಲಾಖೆ ಲಾಠಿ ಡ್ರಿಲ್ ನಡೆಸಿದ್ದು. ಅಬ್ದುಲ್​ ರಹಿಮಾನ್​ ಹತ್ಯೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ ನಡೆಸುವ ಮುನ್ನ ಈ ಡ್ರಿಲ್​ ನಡೆಸಲಾಗಿದೆ. ಇದನ್ನೂ ಓದಿ :ಅಣ್ಣಾ ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ

ಸುಹಾಸ್​ ಶೆಟ್ಟಿ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಮುಸ್ಲಿಂ ಯುವಕನೊಬ್ಬನ ಹತ್ಯೆಯಾಗಿರುವ ಹಿನ್ನಲೆ ಮಂಗಳೂರಿನಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗಿದೆ. ಅಬ್ದುಲ್​ ರೆಹಮಾನ್​ ಹತ್ಯೆಯಾದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು. ಮಂಗಳೂರಿನ ಕಮಿಷನರ್​, ದಕ್ಷಿಣ ಕನ್ನಡದ ಎಸ್ಪಿ ಸೇರಿದಂತೆ ಪೊಲೀಸ್​ ಇಲಾಖೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ :ರಸ್ತೆಗೆ ಬೇಲಿ ಹಾಕಿದ ಭೂಪ; ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ

ಅಬ್ದುಲ್​ ರಹಿಮಾನ್​ ಹತ್ಯೆ ಖಂಡಿಸಿ ಎಸ್​ಡಿಪಿಐ (SDPI) ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದು. ಮಂಗಳೂರಿನ ಹೃದಯ ಭಾಗವಾದ ಕ್ಲಾಕ್​ ಟವರ್​ ಮುಂಭಾಗದಲ್ಲಿ ಎಸ್​ಡಿಪಿಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿವೆ. ಆದರೆ ಅದಕ್ಕೂ ಮುನ್ನ ಕೆಎಸ್​ಆರ್​ಪಿ ತುಕಡಿ ಕ್ಲಾಕ್​ ಟವರ್ ಮುಂಭಾಗ ಲಾಠಿ ಡ್ರಿಲ್​ ನಡೆಸಿದ್ದು ನಗರ ಪೊಲೀಸ್ ಆಯುಕ್ತ ಸುಧೀರ್​ ಕುಮಾರ್​ ರೆಡ್ಡಿ ಅವರ ಸೂಚನೆಯಂತೆ ಡ್ರಿಲ್ ನಡೆಸಲಾಗಿದೆ. ಇದನ್ನೂ ಓದಿ :ಕಲ್ಲಡ್ಕ ಪ್ರಭಾಕರ್ ಮೇಲೆ FIR; ಹಿಂದೂಗಳನ್ನ ಟಾರ್ಗೆಟ್​ ಮಾಡಿದ್ದಾರೆ ಎಂದು ರೇಣುಕಚಾರ್ಯ ಆರೋಪ

ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕೆಎಸ್​ಆರ್​ಪಿ ಪೊಲೀಸರು ಕ್ಲಾಕ್​ ಟವರ್ ಮುಂಭಾಗದಲ್ಲಿ ಲಾಠಿ ಡ್ರಿಲ್​ ಕೈಗೊಂಡಿದ್ದು. ಕಿಡಿಗೇಡಿಗಳ ಹೃದಯದಲ್ಲಿ ನಡುಕ ಹುಟ್ಟುವಂತೆ ಡ್ರಿಲ್​ ನಡೆಸಲಾಗಿದೆ. ಇನ್ನಾದರೂ ಕರಾವಳಿ ಶಾಂತವಾಗುತ್ತ ಎಂಬುದನ್ನು ಕಾದು ನೋಡಬೇಕಿದೆ.

Exit mobile version