Site icon PowerTV

ಹಿಂದೂ ಮುಖಂಡನಿಂದ ಯುವತಿಗೆ ಕಿರುಕುಳ; 7 ಮದುವೆ ಕ್ಯಾನ್ಸಲ್​ ಮಾಡಿ ಜೀವ ಬೆದರಿಕೆ

ಮಂಡ್ಯ: ಮದುವೆ ನಿರಾಕರಿಸಿದ್ದಕ್ಕೆ ಹಿಂದೂ ಮುಖಂಡನೊಬ್ಬ ಯುವತಿಗೆ ಕಿರುಕುಳ ನೀಡಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಜೊತೆಗೆ ಯುವತಿ ಮದುವೆಯಾಗದಂತೆ ಕಿರುಕುಳ ನೀಡಿದ್ದು. ಆಕೆಗೆ ನಿಶ್ಚಯವಾಗಿದ್ದ ಸುಮಾರು 7 ಮದುವೆಗಳನ್ನು ನಿಲ್ಲಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಆಕೆಯನ್ನು ಮದುವೆಯಾಗಲು ಬರುವ ಗಂಡುಗಳಿಗೆ ಆ್ಯಸಿಡ್​ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ. ಇದನ್ನೂ ಓದಿ:ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ

ಕೆರಗೋಡು ಧ್ವಜ ದಂಗಲ್ ರುವಾರಿ, RSS ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ಅಲಿಯಾಸ್ ಬಾಲು ವಿರುದ್ಧ ಇಂತಹ ಆರೋಪ ಕೇಳಿ ಬಂದಿದ್ದು. ಇದೀಗ ಆರೋಪಿಯ ವಿರುದ್ದ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ..!

RSS ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ಮತ್ತು ಲಾವಣ್ಯ ಜೊತೆ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಈ ವೇಳೆ ಬಾಲು ಮತ್ತು ಲಾವಣ್ಯ ಜೊತೆಯಾಗಿ ಪೋಟೊ ತೆಗೆಸಿಕೊಂಡಿದ್ದರು. ಆದರೆ ಬಾಲು ಹಲವು ಸುಳ್ಳು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದ. ಜೊತೆಗೆ ಬಾಲುವಿನ ನಡವಳಿಕೆಯಿಂದ ಬೇಸತ್ತಿದ್ದ ಯುವತಿ ಮದುವೆ ಕ್ಯಾನ್ಸಲ್​ ಮಾಡಿಕೊಂಡಿದ್ದಳು. ಇದನ್ನೂ ಓದಿ :ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಪ್ರಕರಣ; ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಹಿಳೆ

ಆದರೆ ಇದರಿಂದ ಕೋಪಗೊಂಡ ಬಾಲಕೃಷ್ಣ ಯುವತಿಗೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದು. ಲಾವಣ್ಯ ಮದುವೆಯಾಗದಂತೆ ಕಿರುಕುಳ ನೀಡಿದ್ದಾನೆ. ಮದುವೆಯಾಗಲು ಬರುವ ಹುಡಗರ ಬಳಿ ಚಾಡಿ ಹೇಳುವ ಮೂಲಕ ಇಲ್ಲಿಯವರೆಗೂ ಯುವತಿ ಜೊತೆ ನಿಶ್ಚಯವಾಗಿದ್ದ ಸುಮಾರು 7 ಮದುವೆಗಳನ್ನ ಕ್ಯಾನ್ಸಲ್​ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಲಾವಣ್ಯ ಜೊತೆ ಮದುವೆ ನಿಶ್ಚಯವಾದರೆ. ಆಕೆಯ ಹುಡುಗನಿಗೆ ಹಳೆಯ ಪೋಟೊಗಳನ್ನ ತೋರಿಸಿ ಚಾಡಿ ಹೇಳಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆ್ಯಸಿಡ್ ಹಾಕಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ :ಪಹಲ್ಗಾಂ ಉಗ್ರರು ಬಿಜೆಪಿಗೆ ಸೇರಿದ್ದಾರೆ, ಬಿಜೆಪಿ ಈ ಕುರಿತು ಘೋಷಿಸಲಿದೆ; ಸಂಜಯ್​ ರಾವುತ್​

ಇವೆಲ್ಲದರಿಂದ ಬೇಸತ್ತಿರುವ ಯುವತಿ ಆರೋಪಿ ಬಾಲಕೃಷ್ಣ ವಿರುದ್ದ ಮಂಡ್ಯದ ಕೆರಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ತನಗೆ ರಕ್ಷಣೆ ನೀಡಿ ಆರೋಪಿ ಬಾಲು ವಿರುದ್ದ ಕ್ರಮ ಕೈಗೊಳ್ಳಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

https://whatsapp.com/channel/0029Va5cjRY9Gv7Tls4bhb1n

Exit mobile version