Site icon PowerTV

ರಸ್ತೆಗೆ ಬೇಲಿ ಹಾಕಿದ ಭೂಪ; ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ

ವಿಜಯನಗರ : ಸ್ಮಶಾನಕ್ಕೆ ಹೋಗುವ ರಸ್ತೆಗೆ ವ್ಯಕ್ತಿಯೋರ್ವ ಮುಳ್ಳುತಂತಿ ಹಾಕಿರುವ ಘಟನೆ ವಿಜಯನಗರದಲ್ಲಿ ನಡೆದಿದ್ದು. ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಬಂದ ಜನರು ಸ್ಮಶಾನಕ್ಕೆ ತೆರಳಲು ಸಾಧ್ಯವಾಗದೆ ಪರದಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು. ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಖಬರಿಸ್ತಾನಕ್ಕೆ ತೆರಳಲು ಬಳಸುತ್ತಿದ್ದ ರಸ್ತೆಗೆ ಭೂಪನೊಬ್ಬ ತಂತಿ ಬೇಲಿ ಹಾಕಿದ್ದಾನೆ. ಖಾಸಗಿ ವ್ಯಕ್ತಿಯೊಬ್ಬ ತಂತಿ ಬೇಲಿ ಹಾಕಿದ ಪರಿಣಾಮ ಶವವನ್ನು ಹೊತ್ತುತಂದ ಕುಟುಂಬಸ್ಥರು ಖಬರಿಸ್ತಾನಕ್ಕೆ ತೆರಳಲಾಗದೆ ಪರದಾಡಿದ್ದಾರೆ. ಇದನ್ನೂ ಓದಿ:ಕಲ್ಲಡ್ಕ ಪ್ರಭಾಕರ್ ಮೇಲೆ FIR; ಹಿಂದೂಗಳನ್ನ ಟಾರ್ಗೆಟ್​ ಮಾಡಿದ್ದಾರೆ ಎಂದು ರೇಣುಕಚಾರ್ಯ ಆರೋಪ

ಪಹಣಿಯಲ್ಲಿ ರಸ್ತೆ ಇದೆ ಎಂದು ಉಲ್ಲೇಖಿಸಿದ್ದರು ಕೂಡ ವ್ಯಕ್ತಿ ದಾರಿ ಬಿಡದೆ ಮುಳ್ಳು ತಂತಿ ಬಿಗಿದಿದ್ದು. ನಮ್ಮ ಜಮೀನು ರಸ್ತೆಯ ಮೂಲಕ ಸ್ಮಶಾನಕ್ಕೆ ಹೋಗೋದಕ್ಕೆ ದಾರಿ ಬಿಡೋದಿಲ್ಲ ಎಂದು ಹಠ ಹಿಡಿದ್ದಾನೆ. ಕೊನೆಗೆ ಪಕ್ಕದ ಜಮೀನನ್ನ ಸುತ್ತಾಕಿಕೊಂಡು ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜೊತೆಗೆ ತಹಶೀಲ್ದಾರ್​ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ ;ಕೌಟುಂಬಿಕ ಕಲಹ; ಅತ್ತಿಗೆಯನ್ನು ಕೊಂದು, ಆಕೆಯ ರುಂಡ ಹಿಡಿದು ಪೊಲೀಸರಿಗೆ ಶರಣಾದ ವ್ಯಕ್ತಿ

 

Exit mobile version