Site icon PowerTV

ಮಂಗಳೂರಲ್ಲಿ ಮಳೆ ಅವಾಂತರ; ಕಾಂಪೌಂಡ್​ ಕುಸಿದು ಬಾಲಕಿ ಸಾ*ವು, ಸ್ಥಳಕ್ಕೆ ತೆರಳಲು ಸಚಿವರಿಗೆ ಸಿಎಂ ಸೂಚನೆ

ಮಂಗಳೂರು : ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರಿನ ಹಲವಡೆ ಭಾರಿ ಅನಾಹುತಗಳು ಸಂಭವಿಸಿದ್ದು. ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮಂಗಳೂರಿನ ದೇರಳಕಟ್ಟೆಯಲ್ಲಿ ಕಾಂಪಂಡ್​ ಕುಸಿದು 10 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಆಕೆಯ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಓರ್ವ ಸಾ*ವು, ಮೂವರ ರಕ್ಷಣೆ

ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ (10) ಎನ್ನುವ ಮಗು ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ.

ಮತ್ತೊಂದು ಹೃದಯ ವಿದ್ರಾವಕ ಘಟನೆ..!

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಮೊಂಟೆಪದವು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಮನೆಯೊಳಗೆ ಸಿಲುಕಿದ್ದು. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ತೋಳಿನಲ್ಲಿ ರಕ್ಷಿಸಿರುವ ವಿಡಿಯೋ ಹೃದಯ ವಿದ್ರಾವಕವಾಗಿದೆ. ಸ್ಥಳಕ್ಕೆ ಧಾವಿಸಿರುವ SDRF, NDRF ಸಿಬ್ಬಂದಿಗಳು ರಕ್ಷಣ ಕಾರ್ಯ ಆರಂಭಿಸಿದ್ದು. ಆದರೆ ದುರಾದೃಷ್ಟವಶಾತ್​ ಮೂರು ವರ್ಷದ ಆರ್ಯನ್​ ಸಾವನ್ನಪ್ಪಿದ್ದಾನೆ. 1 ವರ್ಷದ ಮಗು ಆರುಷ್​ನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ತಾಯಿ ಅಶ್ವಿನಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ:ಹಿಂದೂ ಮುಖಂಡರಿಗೆ ಜೈಷ್​​ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ

ಸಿಎಂ ಸೂಚನೆ, ಮಂಗಳೂರಿಗೆ ತೆರಳಿದ ಸಚಿವ ದಿನೇಶ್​ ಗುಂಡುರಾವ್​..!

ಮಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಅವಾಂತರದಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು. ಇದರ ನಡುವೆ ಸಿಎಂ ಸಿದ್ದರಾಮಯ್ಯ ಸಚಿವ ದಿನೇಶ್​ ಗುಂಡುರಾವ್​ ಅವರನ್ನು ಮಂಗಳೂರಿಗೆ ತೆರಳಲು ಸೂಚಿಸಿದ್ದಾರೆ.

ಇದನ್ನೂ ಓದಿ:‘ಧೈರ್ಯದಿಂದ ಆಟವಾಡಿ’; ಫೈನಲ್​ ಪಂದ್ಯಕ್ಕೂ ಮುನ್ನ RCB ಆಟಗಾರರಿಗೆ ಸಂದೇಶ ರವಾನಿಸಿದ ಮಲ್ಯ

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಸಚಿವ ದಿನೇಶ್​ ಗುಂಡುರಾವ್​ ತಮ್ಮ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ಮಂಗಳೂರಿಗೆ ತೆರಳಲಿದ್ದು. ಸಂಜೆ ವೇಳೆಗೆ ಮಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇಂದು ಮಂಗಳೂರಿನಲ್ಲೇ ವಾಸ್ತವ್ಯ ಹೂಡಲಿರುವ ದಿನೇಶ್​ ಗುಂಡುರಾವ್​ ನಾಳೆ ಮಂಗಳೂರಿನಲ್ಲಿ ಸ್ಥಳೀಯ ಜನರೊಂದಿಗೆ ಸಭೆ ನಡೆಸಲಿದ್ದಾರೆ.

Exit mobile version