Site icon PowerTV

‘ಧೈರ್ಯದಿಂದ ಆಟವಾಡಿ’; ಫೈನಲ್​ ಪಂದ್ಯಕ್ಕೂ ಮುನ್ನ RCB ಆಟಗಾರರಿಗೆ ಸಂದೇಶ ರವಾನಿಸಿದ ಮಲ್ಯ

ಐಪಿಎಲ್​ 2025ರ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​ ವಿರುದ್ದ ಆರ್​ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು. ನಾಲ್ಕನೇ ಭಾರಿಗೆ ಫೈನಲ್​ ತಲುಪಿದೆ. ಇದರ ಬೆನ್ನಲ್ಲೇ ಆರ್​ಸಿಬಿ ತಂಡದ ಮಾಜಿ ಮಾಲೀಕ ವಿಜಯ್​ ಮಲ್ಯ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಂಡೀಗಢ್​ನ ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 14.1 ಓವರ್​ಗಳಲ್ಲಿ 101 ರನ್ ಬಾರಿಸಿ ಆಲೌಟ್ ಆಯಿತು. 102 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು 10 ಓವರ್​ಗಳಲ್ಲಿ 106 ರನ್ ಬಾರಿಸಿ 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಇದನ್ನೂ ಓದಿ:ಹೆಂಡತಿ ಕಿರುಕುಳ; ಡೆತ್​ನೋಟ್​ ಬರೆದಿಟ್ಟು ಗಂಡ ಆತ್ಮಹ*ತ್ಯೆ

ಟ್ವಿಟ್​ ಮಾಡಿ ಅಭಿನಂದನೆ ಸಲ್ಲಿಸಿದ ವಿಜಯ್​ ಮಲ್ಯ..!

RCB ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ ಮಲ್ಯ, ಅಭಿನಂದನೆ ಸಲ್ಲಿಸಿದ್ದಾರೆ. ಪಂಜಾಬ್ ಕಿಂಗ್ಸ್​ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಒತ್ತಡದ ಸ್ಪರ್ಧೆಯಲ್ಲಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ಇದು. ಪ್ರಶಸ್ತಿಯತ್ತ ಮುಂದುವರಿಯಿರಿ ಎಂದು ವಿಜಯ ಮಲ್ಯ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕರುಳು ಹಿಂಡುವ ದೃಷ್ಯ; ತಾಯಿ ಮಕ್ಕಳ ಮೇಲೆ ಕುಸಿದು ಬಿದ್ದ ಗೋಡೆ, ರಕ್ಷಣಾಕಾರ್ಯ ಆರಂಭ

ಅಷ್ಟೇ ಅಲ್ಲದೆ ಫೈನಲ್ ಪಂದ್ಯದಲೂ ಧೈರ್ಯದಿಂದ ಆಡಬೇಕೆಂಬ ಸಂದೇಶವನ್ನು ಸಹ ರವಾನಿಸಿದ್ದಾರೆ. ಇದೀಗ ವಿಜಯ ಮಲ್ಯ ಅವರ ಎಕ್ಸ್ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗಳು ಸಹ ವ್ಯಕ್ತವಾಗುತ್ತಿದೆ.

Exit mobile version