ಮುಂಬೈ: ಪಹಲ್ಗಾಂ ದಾಳಿ ನಡೆಸಿದ 6 ಭಯೋತ್ಪಾದಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ, ಅದಕ್ಕೆ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಏಪ್ರೀಲ್ 22ರಂದು ಪಹಲ್ಗಾಂನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಶಸ್ತ್ರದಾರಿಗಳಾಗಿ ಬೈಸರನ್ ಕಣಿವೆಗೆ ಬಂದಿದ್ದ ಈ ಭಯೋತ್ಪಾದಕರು ಕೆಲವೇ ಕ್ಷಣದಲ್ಲಿ ಈ ದೇಶದ 26 ನಾಗರಿಕರ ಪ್ರಾಣ ಕಸಿದುಕೊಂಡು ಕಣಿವೆಯಲ್ಲಿ ಕಣ್ಮರೆಯಾಗಿದ್ದರು. ಇವರಿಗಾಗಿ ಸಶಸ್ತ್ರ ಪಡೆಗಳು ಹುಡುಗಾಟ ನಡೆಸುತ್ತಿದ್ದು. ಇಲ್ಲಿಯವರೆಗೂ ಇವರ ಸುಳಿವು ದೊರೆತಿಲ್ಲ. ಇನ್ನು ಇವರನ್ನು ಯಾಕೆ ಇನ್ನು ಬಂಧಿಸಿಲ್ಲ ಎಂದು ವಿಪಕ್ಷಗಳು ಆಡಳಿತ ಪಕ್ಷದ ಮೇಲೆ ಒತ್ತಡ ಏರುತ್ತಿವೆ. ಇದರ ನಡುವ ಶಿವಸೇನಾ ನಾಯಕ ಸಂಜತ್ ರಾವತ್ ಬಿಜೆಪಿ ವಿರುದ್ದ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ :ರಾಜ್ ಕುಮಾರ್ ಕನ್ನಡವೇ ಸರ್ವಸ್ವ ಅಂತಿದ್ರು, ಆದರೆ ಅವರ ಮಗ..! ಶಿವಣ್ಣ ವಿರುದ್ದ ನಾರಯಣಗೌಡ ಕಿಡಿ
ಇಂದು ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ‘ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರು ಭಯೋತ್ಪಾದಕರನ್ನು ಬಂಧಿಸುವಲ್ಲಿನ ವಿಳಂಬವನ್ನು ಪ್ರಶ್ನಿಸಿದರು. “ಪಹಲ್ಗಾಮ್ ದಾಳಿಯ ಆರು ಭಯೋತ್ಪಾದಕರನ್ನು ಹಿಡಿಯಲಾಗುತ್ತಿಲ್ಲ. ಬಹುಶಃ ಅವರು ಬಿಜೆಪಿ ಸೇರಿರಬಹುದು ಮತ್ತು ಮುಂದೊಂದು ದಿನ ಆ ಆರು ಜನ ಬಿಜೆಪಿಗೆ ಸೇರಿದ್ದಾರೆ ಎಂದು ಬಿಜೆಪಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬರಬಹುದು” ಹೇಳಿದ್ದಾರೆ.
ಇದನ್ನೂ ಓದಿ :ನಟ ದರ್ಶನ್ಗೆ ಗುಡ್ನ್ಯೂಸ್; ವಿದೇಶಕ್ಕೆ ತೆರಳಲು ದಾಸನಿಗೆ ನ್ಯಾಯಾಲಯ ಅನುಮತಿ
ಇನ್ನು ಈ ಹೇಳಿಕೆಗೆ ಬಿಜೆಪಿ ನಾಯಕ ರಾಮ್ ಕದಮ್ ತಿರುಗೇಟು ನೀಡಿದ್ದು. ‘ಸಂಜಯ್ ರಾವತ್ ಸಶಸ್ತ್ರ ಪಡೆಗಳಿಗೆ ಅವಮಾನ ಮಾಡುತ್ತಿದ್ದಾರೆ. ಅವರ ಹೇಳಿಕೆ ಸಂಪೂರ್ಣ ಹಾಸ್ಯಸ್ಪದವಾಗಿದೆ. “ಶಿವಸೇನೆ-ಯುಬಿಟಿ ನಾಯಕರಾದ ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಮತ್ತು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು” ಎಂದು ಕದಮ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.