Site icon PowerTV

ಸ್ಟಾರ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಭೇಟಿಯಾದ ಪ್ರಧಾನಿ ಮೋದಿ

ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಮೇ.30) ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಿದ್ದಾರೆ. ಸೂರ್ಯವಂಶಿಯ ಭೇಟಿಯ ಕುರಿತು ಪ್ರಧಾನಿಗಳು ಪೋಟೊಗಳನ್ನು ಹಂಚಿಕೊಂಡಿದ್ದು. ಯುವ ಕ್ರಿಕೆಟಿಗನಿಗೆ ಶುಭಾಷಯ ಕೋರಿದ್ದಾರೆ.

ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ “ಪಾಟ್ನಾದ ಜೈ ಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ವೈಭವ್​ ಸೂರ್ಯವಂಶಿ ಮತ್ತು ಅವರ ಕುಟುಂಬದ ಜೊತೆ ಭೇಟಿಯಾಗಿದ್ದು. ಇದರ ಪೋಟೊಗಳು ಸೋಷಿಯಲ್​ ಮಿಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ. ಇದನ್ನೂ ಓದಿ:ಸಂಸ್ಕಾರಹೀನರಾಗಿ ವರ್ತಿಸೋ MLC ರವಿ ಕುಮಾರ್​ಗೆ ಮಂಗ ಅಂತ ಹೆಸರಿಡಬೇಕು; ಪ್ರದೀಪ್​ ಈಶ್ವರ್​

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ ಸಂಚಲನ ಮೂಡಿಸಿದ್ದು. ರಾಜಸ್ಥಾನ ರಾಯಲ್ಸ್ ಪರ ಬ್ಯಾಟ್​ ಹಿಡಿದು ಘರ್ಜಿಸಿದ್ದ ವೈಬರ್​ ಗುಜರಾತ್​ ಟೈಟನ್ಸ್​​ ವಿರುದ್ದದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಮೂಲಕ ಐಪಿಎಲ್​ನಲ್ಲಿ ಶತಕ ಭಾರಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್​ಮೆನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಓರ್ವ ಸಾ*ವು, ಮೂವರ ರಕ್ಷಣೆ

ವೈಭವ್ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ..!
ವೈಭವ್ ಮತ್ತು ಅವರ ಕುಟುಂಬದೊಂದಿಗಿನ ಪೋಟೊಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭೇಟಿಯಾದೆ’ ಎಂದು ಬರೆದಿದ್ದಾರೆ. ಅವರ ಕ್ರಿಕೆಟ್ ಕೌಶಲ್ಯವನ್ನು ದೇಶಾದ್ಯಂತ ಪ್ರಶಂಸಿಸಲಾಗುತ್ತಿದೆ! ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಿ ಶುಭ ಕೋರಿದ್ದಾರೆ.ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಓರ್ವ ಸಾ*ವು, ಮೂವರ ರಕ್ಷಣೆ
Exit mobile version