Site icon PowerTV

ಐಪಿಎಲ್​ ಟಿಕೆಟ್​ ಮಾರಾಟ ದಂಧೆ; ಪೊಲೀಸರೆ ಕಿಂಗ್​ಪಿನ್, ನಾಲ್ವರು ಬಂಧನ​

ಬೆಂಗಳೂರು: ಕಾಳಸಂತೆಯಲ್ಲಿ ಐಪಿಎಲ್​ ಪಂದ್ಯಗಳ ಟಿಕೆಟ್​ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು. ಇಬ್ಬರು ಪೊಲೀಸ್​​ ಕಾನ್ಸ್​ಟೇಬಲ್​ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಬಂಧಿತ ಪೊಲೀಸರನ್ನು ವೆಂಟಕಗಿರಿ ಮತ್ತು ರವಿಚಂದ್ರ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ; ಮತ್ತೆ ಉದ್ದಟತನದ ಹೇಳಿಕೆ ನೀಡಿದ ನಟ ಕಮಲ್​ ಹಾಸನ್​

ಮೇ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಕಾನ್ಸ್​ಟೇಬಲ್​ಗಳ ಜೊತೆ ಶಂಕರ್ ಮತ್ತು ಸುರೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ.

ಇಬ್ಬರು ಪೊಲೀಸರು ಐಪಿಎಲ್ ಟಿಕೆಟ್‌ಗಳನ್ನು ರೂ. 6500, ರೂ. 5500 ಮತ್ತು ರೂ. 5000 ಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಇತರೆ ಪೊಲೀಸರು ಭಾಗಿಯಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ಬಳಿಯಿಂದ 61 ಟಿಕೆಟ್ ಹಾಗೂ 20 ಸಾವಿರ ನಗದು ಹಣ ಸೀಜ್ ಮಾಡಿದ್ದು. ವಿಜಯನಗರ ಪಾರ್ಕ್​ ಬಳಿ ಟಿಕೆಟ್​ ಮಾರಾಟ ಮಾಡುವ ವೇಳೆ ಆರೋಪಿಗಳು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಇದನ್ನೂ ಓದಿ :ಸ್ಟಾರ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಭೇಟಿಯಾದ ಪ್ರಧಾನಿ ಮೋದಿ

ಆರೋಪಿಗಳ ವಿರುದ್ದ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು. ಕೆಲಸದಿಂದ ವಜಾ ಆಗಿರುವ ಕಾನ್ಸ್​ಟೇಬಲ್​ಗಳು ಬಂಧನ ಭೀತಿಯಿಂದ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ಕಾನ್ಸ್ ಟೇಬಲ್​ಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ.ಇದನ್ನೂ ಓದಿ :ಸಂಸ್ಕಾರಹೀನರಾಗಿ ವರ್ತಿಸೋ MLC ರವಿ ಕುಮಾರ್​ಗೆ ಮಂಗ ಅಂತ ಹೆಸರಿಡಬೇಕು; ಪ್ರದೀಪ್​ ಈಶ್ವರ್​

Exit mobile version