Site icon PowerTV

ನಟ ದರ್ಶನ್​ಗೆ ಗುಡ್​ನ್ಯೂಸ್​; ವಿದೇಶಕ್ಕೆ ತೆರಳಲು ದಾಸನಿಗೆ ನ್ಯಾಯಾಲಯ ಅನುಮತಿ

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್​ಗೆ ನ್ಯಾಯಾಲಯ ಗುಡ್​ನ್ಯೂಸ್​ ಕೊಟ್ಟಿದ್ದು. ದಾಸ ದರ್ಶನ್​ಗೆ ವಿದೇಶಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಡೆವಿಲ್​ ಸಿನಿಮಾ ಶೂಟಿಂಗ್​ಗೆ ವಿದೇಶಕ್ಕೆ ತೆರಳಲು ಎಂದು ನಟ ದರ್ಶನ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ :ದೊಡ್ಡವರೆಲ್ಲಾ ಜಾಣರಲ್ಲ; ವಿವಾದಾತ್ಮಕ ಹೇಳಿಕೆ ಕೊಟ್ಟ ಕಮಲ್​ಗೆ ಟಾಂಗ್​ ಕೊಟ್ಟ ರಚಿತಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್​ ಕೆಲ ತಿಂಗಳ ಹಿಂದಷ್ಟೆ ಜಾಮೀನು ಪಡೆದು ಬಂಧನದಿಂದ ಬಿಡುಗಡೆಯಾಗಿದ್ದರು. ಕಳೆದ ಕೆಲ ತಿಂಗಳಿಂದ ತಮ್ಮ ಬಹು ನಿರೀಕ್ಷಿತ ಡೆವಿಲ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿರುವ ದರ್ಶನ್​ ರಾಜಸ್ಥಾನ ಸೇರಿದಂತೆ ಹಲವಡೆ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಬಂದಿದ್ದಾರೆ.

ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗಲು ಅನುಮತಿ ಕೋರಿ ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದರು. 64ನೇ CCH ಕೋರ್ಟ್‌ನ ನ್ಯಾ. ಐ.ಪಿ ನಾಯ್ಕ್‌ ಅವರು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದು. ದರ್ಶನ್‌ಗೆ ಅನುಮತಿ ನೀಡಿ ಆದೇಶಿಸಿದ್ದಾರೆ. ಇದನ್ನೂ ಓದಿ :ಅಣ್ಣ-ತಮ್ಮಂದಿರ ನಡುವೆ ಜಗಳ; ಬಿಡಿಸಲು ಬಂದ ತಾಯಿಯನ್ನೇ ಕೊ*ಲೆ ಮಾಡಿದ ಪಾಪಿ ಮಗ

ಡೆವಿಲ್ ಸಿನಿಮಾ ಚಿತ್ರೀಕರಣದ ಹಿನ್ನೆಲೆಯಲ್ಲಿ ದುಬೈ ಮತ್ತು ಯೂರೋಪ್​​ಗೆ ತೆರಳಲು ಅವಕಾಶ ಕೋರಿ CRPC ಸೆಕ್ಷನ್ 439(1) (b) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಒಟ್ಟು 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅನುಮತಿ ಕೋರಲಾಗಿದೆ. ಜೂನ್ 1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಶೂಟಿಂಗ್‌ಗಾಗಿ ದುಬೈ ಹಾಗೂ ಯುರೋಪ್‌ಗೆ ತೆರಳಲು ಕೋರ್ಟ್‌ ಅವಕಾಶ ನೀಡಿದೆ.

Exit mobile version