Site icon PowerTV

ಅಣ್ಣ-ತಮ್ಮಂದಿರ ನಡುವೆ ಜಗಳ; ಬಿಡಿಸಲು ಬಂದ ತಾಯಿಯನ್ನೇ ಕೊ*ಲೆ ಮಾಡಿದ ಪಾಪಿ ಮಗ

ಹುಬ್ಬಳ್ಳಿ: ಅಣ್ಣ-ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ತಾಯಿಗೆ ಪಾಪಿ ಮಗನೊಬ್ಬ ಗಾಜಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು ಪದ್ಮಾ ಚಲೂರಿ ಎಂದು ಗುರುತಿಸಲಾಗಿದೆ, ಸ್ವಂತ ತಾಯಿ ಸಾವಿಗೆ ಕಾರಣರಾದ ಮಕ್ಕಳನ್ನು ಲಕ್ಷ್ಮಣ್​ ಮತ್ತು ಮಂಜುನಾಥ್​ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ನಗರದ ತೊರವಿಹಕ್ಕಲ್​ ಬಡಾವಣೆಯಲ್ಲಿ ಘಟನೆ ನಡೆದಿದ್ದು. ಪದ್ಮಾಳ ಮಕ್ಕಳಾದ ಮಂಜುನಾಥ್​ ಮತ್ತು ಲಕ್ಷ್ಮಣ್​ ಮನೆಯ ಕೆಳಗೆ ಕಟಿಂಗ್ ಶಾಪ್​ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಅದರಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ(ಮೇ.29) ಮಂಜುನಾಥ ಮತ್ತು ಲಕ್ಷ್ಮಣ್ ನಡುವೆ ನೂರು ರೂಪಾಯಿ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ವಿಷಯವನ್ನ ಕಮರಿಪೇಟೆ ಪೊಲೀಸ್​ ಠಾಣೆವರೆಗೂ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ :ಪಹಲ್ಗಾಂನಲ್ಲಿ ಬಲಿಯಾದ ಶುಭಂ ದ್ವಿವೇದಿ ಕುಟುಂಬವನ್ನ ಭೇಟಿಯಾದ ಪ್ರಧಾನಿ ಮೋದಿ

ಆದರೆ ನಂತರ ಪೊಲೀಸ್​ ಠಾಣೆಯಲ್ಲಿ ಈ ಸಮಸ್ಯೆಯನ್ನ ಮನೆಯಲ್ಲೇ ಬಗೆಹರಿಸಿಕೊಳ್ಳುವುದಾಗಿ ಹೇಳಿ ಮನೆಗೆ ಬಂದಿದ್ದಾರೆ. ಆದರೆ ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಮಂಜುನಾಥ್​ ಮತ್ತೆ ಲಕ್ಷ್ಮಣ್​ ಜೊತೆ ಜಗಳ ಆರಂಭಿಸಿದ್ದು. ಜಗಳ ತಾರಕಕ್ಕೆ ಹೋಗಿದೆ, ಈ ವೇಳೆ ಮಕ್ಕಳ ಜಗಳ ಬಿಡಿಸಲು ಬಂದ ತಾಯಿ ಪದ್ಮಳಾ ಹೊಟ್ಟೆಗೆ ಪಾಪಿ ಪುತ್ರ ಮಂಜುನಾಥ್​ ಕಿಟಕಿಗೆ ಅಳವಡಿಸಿದ್ದ ಗಾಜಿನಿಂದ ಇರಿದು ಬಿಟ್ಟಿದ್ದಾನೆ.ಇದನ್ನೂ ಓದಿ :ಐಪಿಎಲ್​ ಟಿಕೆಟ್​ ಮಾರಾಟ ದಂಧೆ; ಪೊಲೀಸರೆ ಕಿಂಗ್​ಪಿನ್, ನಾಲ್ವರು ಬಂಧನ​

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ಕೂಡಲೇ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದ್ರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಪದ್ಮಾ, ಇಂದು ನಸುಕಿನ ಜಾವದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಪಾಪಿ ಮಂಜುನಾಥ, ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನಂತೆ. ಆದರ ಕಳೆದ ರಾತ್ರಿ ಹೆತ್ತ ತಾಯಿಯ ಉಸಿರನ್ನೇ ನಿಲ್ಲಿಸಿದ್ದಾನೆ.

ಇದನ್ನೂ ಓದಿ :ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ; ಮತ್ತೆ ಉದ್ದಟತನದ ಹೇಳಿಕೆ ನೀಡಿದ ನಟ ಕಮಲ್​ ಹಾಸನ್​

ಸದ್ಯ ಪದ್ಮಾ ಕೊಲೆಗೆ ಸಂಬಂಧಿಸಿದಂತೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ. ಆದರೆ ಹೆತ್ತ ತಾಯಿಯ ಉಸಿರಾಗಬೇಕಿದ್ದ ಮಕ್ಕಳು, ತಾಯಿಯ ಉಸಿರನ್ನೇ ತಗೆದಿರೋದು ಮಾತ್ರ ದುರಂತವೇ.

Exit mobile version