Site icon PowerTV

ಪರೀಕ್ಷೆಯಲ್ಲಿ ಫೇಲ್​; ಓದುಲು ಇಷ್ಟವಿಲ್ಲ ಎಂದು ಕಾಲೇಜು ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ

ಕೊಡಗು : ಪರೀಕ್ಷೆಯಲ್ಲಿ ಫೇಲ್​ ಆಗಿ ಬ್ಯಾಕ್​ಲಾಗ್​ ಇದೆ ಎಂಬ ಕಾರಣಕ್ಕೆ ರಾಯಚೂರು ಮೂಲದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಯನ್ನು 19 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ :ಸಾವರ್ಕರ್​ ಬಗ್ಗೆ ಮಾತನಾಡಿದ ರಾಹುಲ್​ ಮುಖಕ್ಕೆ ಮಸಿ ಬಳಿಯುತ್ತೇವೆ; ಶಿವಸೇನಾ ನಾಯಕ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಸಿಇಟಿ ಕಾಲೇಜಿನ ಹಾಸ್ಟೆಲ್ ಘಟನೆ ನಡೆದಿದ್ದು. ರಾಯಚೂರು ಮೂಲದ ತೇಜಸ್ವಿನಿ ಪ್ರಥಮ ವರ್ಷದ ಎಐಎಂಎಲ್​ ವಿಷಯದಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ತೇಜಸ್ವಿನಿ. ತನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಸಂಭ್ರಮಪಟ್ಟಿದ್ದಳು.

ಆದರೆ ನಿನ್ನೆ ತರಗತಿ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಹಾಸ್ಟೆಲ್​ಗೆ ಬಂದಿದ್ದ ಯುವತಿ. ಹಾಸ್ಟೆಲ್​ ರೂಂನಲ್ಲಿ ಡೆತ್​ನೋಟ್​ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 4.30ರ ವೇಳೆಗೆ ಆಕೆಯ ಸಹಪಾಠಿಗಳು ಕೊಠಡಿಗೆ ಹೋದಾಗ ಒಳಗಿನಿಂದ ಬಾಗಿಲು ಹಾಕಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಎಷ್ಟೇ ಕೂಗಿದರು ತೇಜಸ್ವಿನಿ ಬಾಗಿಲು ತೆರೆಯದ ಹಿನ್ನಲ್ಲೆ ಹಾಸ್ಟೆಲ್​ ಮೇಲ್ವಿಚಾರಕರಿಗೆ ವಿಷಯ ತಿಳಿಸಿ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:ಆಪರೇಷನ್​ ಸಿಂಧೂರ್​ ಇನ್ನು ಮುಗಿದಿಲ್ಲ; ಭಾರತ-ಪಾಕ್‌ ಗಡಿಯಲ್ಲಿರೋ 4 ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್

ಆತ್ಮಹತ್ಯೆಗೂ ಮುನ್ನ ತೇಜಸ್ವಿನಿ ಡೆತ್​ನೋಟ್​ ಬರೆದಿದ್ದು. ಈ ಡೆತ್​ನೋಟ್​ನಲ್ಲಿ ಪರೀಕ್ಷೆಯಲ್ಲಿ 6 ಬ್ಯಾಕ್​ಲ್ಯಾಗ್​ ಇದ್ದು, ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಶವವನ್ನು ಶವಗಾರಕ್ಕೆ ರವಾನೆ ಮಾಡಿದ್ದಾರೆ.

Exit mobile version