Site icon PowerTV

ಅಪ್ರಾಪ್ತ ಬಾಲಕಿಗೆ ಡ್ಯಾನ್ಸ್​ ಮಾಸ್ಟರ್​ನಿಂದ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬೆಂಗಳೂರು: ಡ್ಯಾನ್ಸ್​ ಮಾಸ್ಟರ್​ ಒಬ್ಬ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಕಾಮುಕ ಶಿಕ್ಷಕನನ್ನು 28 ವರ್ಷದ ಭಾರತಿ ಕಣ್ಣನ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ :ಹೃದಯಘಾತಕ್ಕೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಸಾ*ವು

ಮೇ. 24ರ ಬೆಳಿಗ್ಗೆ ಕಾಡುಗೋಡಿಯಲ್ಲಿ ಘಟನೆ ನಡೆದಿದ್ದು. ಡ್ಯಾನ್ಸ್​ ಮಾಸ್ಟರ್​ ಭಾರತಿ ಕಣ್ಣನ್​ ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಅಪ್ರಾಪ್ತೆಯನ್ನು ಕಾರು ಹತ್ತಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ.

ಅಪ್ರಾಪ್ತ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆರೋಪಿ ಕಾರು ನಿಲ್ಲಿಸಿ, ತಾನು ಡ್ಯಾನ್ಸ್ ಮಾಸ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಜೊತೆಗೆ ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಆಕೆಯನ್ನು ನಂಬಿಸಿ, ಕಾರು ಹತ್ತಿಸಿಕೊಂಡಿದ್ದಾನೆ. ಒಳಗೆ ಕುಳಿತ ಬಳಿಕ ಕಾರ್ ಲಾಕ್ ಮಾಡಿಕೊಂಡಿದ್ದಾನೆ. ಸ್ವಲ್ಪ ದೂರ ಹೋಗುತ್ತಲೇ ಕಾರು ನಿಲ್ಲಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಆಕೆಯನ್ನು ಹತ್ತಿಸಿಕೊಂಡಿದ್ದ ಸ್ಥಳಕ್ಕೆ ವಾಪಾಸ್​ ಬಿಟ್ಟು ಹೋಗಿದ್ದಾನೆ. ಇದ್ನೂ ಓದಿ:ಪರೀಕ್ಷೆಯಲ್ಲಿ ಫೇಲ್​; ಓದುಲು ಇಷ್ಟವಿಲ್ಲ ಎಂದು ಕಾಲೇಜು ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ

ಘಟನೆ ಬಗ್ಗೆ ಅಪ್ರಾಪ್ತೆ ತನ್ನ ಪೋಷಕರಿಗೆ ತಿಳಿಸಿದ್ದು, ತಕ್ಷಣ ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಭಾರತಿ ಕಣ್ಣನ್​ ಅವರನ್ನು ಬಂಧಿಸಿದ್ದಾರೆ.

Exit mobile version