Site icon PowerTV

ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋದು ಸುಳ್ಳು; ಕಮಲ್ ಹಾಸನ್​ ವಿರುದ್ದ ಚೇತನ್​ ಅಹಿಂಸಾ ವಾಗ್ದಾಳಿ

ಹಾವೇರಿ : ಕನ್ನಡ ಭಾಷೆ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ನಟ ಚೇತನ್​ ಅಹಿಂಸಾ​ ‘ಕಮಲ ಹಾಸನ್ ಒಳ್ಳೆಯ ಪ್ರತಿಭಾವಂತ ನಟ. ಆದರೆ ಅವರು ಹೇಳಿದ ಹಾಗೆ ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬುದು ಶುದ್ದ ಸುಳ್ಳು. ಆವರ ಮಾತನ್ನ ನಾವು ಒಪ್ಪಲ್ಲ ಎಂದು ಹೇಳಿದರು.

ಹಾವೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಚೇತನ್​ ಅಹಿಂಸಾ​ ” ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋದು ಶುದ್ಧ ಸುಳ್ಳು. ಕನ್ನಡ & ತಮಿಳು ಒಂದೇ ದ್ರಾವಿಡ ಭಾಷೆ. ಅದರಿಂದ ಸಹೋದರಿಯ ಭಾಷೆ. ಆದರೆ ತಮಿಳು ಅನ್ನೋದು ತಾಯಿ ಅಥವಾ ತಂದೆ ಅನ್ನೋದನ್ನ ನಾವು ಒಪ್ಪಲ್ಲ. ಅದು ಸತ್ಯ ಅಂತ ಗೊತ್ತಾದರೂ ಕಮಲ್​ ಹಾಸನ್​ ಮಂಡತನ ತೋರಿಸಿದ್ದು, ಸಣ್ಣತನದ ನಡವಳಿಕೆ. ಇದನ್ನೂ ಓದಿ :ಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್​ ಸಿದ್ದಿಕಿ, ಬಿಜೆಪಿ ನಾಯಕ

ಇವತ್ತಿನ ದಿನ ನಾವೆಲ್ಲಾ ಹೇಳೊದು ಸತ್ಯವಾಗಿರಬೇಕು. ಸುಳ್ಳು ಸತ್ಯ ಅಂತ ಗೊತ್ತಾದ ಮೇಲೆ ಸರಿಪಡಿಸಿಕೊಳ್ಳೊ ವಿನಯ ಬೇಕು. ಆದರೆ ಆ ವಿನಯ ಕಮಲ ಹಾಸನ್​ನಲ್ಲಿ ಕಾಣ್ತಿಲ್ಲ. ಸುಳ್ಳಿನ ವಿಚಾರದಲ್ಲಿ ಅವರು ಮೆರೆಯಲು ನೊಡ್ತಿದ್ದಾರೆ ಇದನ್ನ ನಾವು ಒಪ್ಪಲ್ಲ. ತಮಿಳುನಾಡಿನ ಕೆಲ ರಾಜಕಾರಣಿಗಳ ಮಾತುಗಳನ್ನ ಸಹ ಕೇಳಿದ್ದೀನಿ.
ತೋಲ್ ತಿರುಮಾವಲವನ್ ರಾಬರ್ಟ್ ರಾಬರ್ಟ್ ಕಾಲ್ಡ್ ವೆಲ್ ವಿಚಾರ ಪ್ರಸ್ತಾಪಿಸಿದ್ದಾರೆ. 1856 ಲಿಂಗುಷ್ಟಿಕ್ ಹೇಳಿದ್ದಾರೆ ತಮಿಳು ಕನ್ನಡ ತಾಯಿ ಅನ್ನೋದು ಹೇಳಿದ್ದಾರೆ ಅಂತ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ :‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ’; ರೆಬಲ್​ ಸ್ಟಾರ್ ನೆನೆದು ದರ್ಶನ್​ ಟ್ವಿಟ್

ಅದೇ ರಾಬರ್ಟ್ 170 ವರ್ಷದ ಹಿಂದೆ ಬಿಳಿ ಜನಾಂಗದವರು ಮತ್ತು ಮೇಲ್ಜಾತಿಯವರೂ ನಮ್ಮ ದ್ರಾವಿಡರಿಗಿಂತ ಶ್ರೇಷ್ಠ ಅಂತೇಳಿದ್ದಾರೆ, ಅದ್ನ ನೀವು ಒಪ್ಪಿಕೊಳ್ತೀರಾ. ತೆಲಗು ಸಾಹಿತ್ಯ ಕನ್ನಡಕ್ಕಿಂತ ಕಡಿಮೆಯಿದೆ ಅನ್ನೋ ಕಾರಣಕ್ಕೆ ಮೂರ್ಖತನ ಮಾತು ಹೇಳಿದರೆ ಅದಕ್ಕೆ ಅರ್ಥವಿಲ್ಲ. ಈ ವಿಚಾರ ಕರ್ನಾಟಕದ ಜನತೆಗೆ ಭಾವನಾತ್ಮಕವಾಗಿ ನೋವಾಗಿದೆ. ಆದರೂ ನೀವು ಕ್ಷಮೆಯಾಚಿಸಲ್ಲ. ಇದು ಅವರ ಸಣ್ಣತನವನ್ನ ತೋರಿಸುತ್ತೆ ಎಂದು ಚೇತನ್​ ಅವರು ಹೇಳಿದರು.

Exit mobile version