Site icon PowerTV

‘ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ’; ಅತ್ಯಾಚಾರ ಆರೋಪಿಗೆ ಸುಪ್ರೀಂ ಜಾಮೀನು

ದೆಹಲಿ: 40 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ 23 ವರ್ಷದ ಆರೋಪಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ಸಂತ್ರಸ್ಥ ಮಹಿಳೆ 9 ತಿಂಗಳಾದರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆಕೆಯೇನು ಮಗು ಅಲ್ಲ. ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದ್ದು. “ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ನೀವು ಯಾವ ಆಧಾರದ ಮೇಲೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೀರಿ. ಆಕೆ ಮಗುವಲ್ಲ. ಮಹಿಳೆಗೆ 40 ವರ್ಷ. ಅವರಿಬ್ಬರು ಒಟ್ಟಿಗೆ ಜಮ್ಮುವಿಗೆ 7 ಸಲ ಹೋಗಿದ್ದರು. ಆಕೆಯ ಪತಿಯೇ ಆಕ್ಷೇಪವೆತ್ತಲಿಲ್ಲ, ಹೀಗಿರುವಾಗ ಇದನ್ನು ಅತ್ಯಾಚಾರ ಎಂದು ಹೇಗೆ ಕರೆಯುವಿರಿ ಎಂದು ಕಠು ಶಬ್ದಗಳಲ್ಲಿ ಸುಪ್ರೀಂ ಕೋರ್ಟ್ ವಿಶ್ಲೇಷಿಸಿದೆ. ಇದನ್ನೂ ಓದಿ :KSRTC ಬಸ್​-ಬೈಕ್​ ನಡುವೆ ಭೀಕರ ಅಪಘಾತ; ಇಬ್ಬರು ಸಾ*ವು

ಈಗೀರುವಾಗ ಒಂಬತ್ತು ತಿಂಗಳಿಂದ ಜೈಲಿನಲ್ಲಿರುವ ಆರೋಪಿಗೆ ಜಾಮೀನು ನೀಡಲು ಸೂಕ್ತ ಕಾರಣಗಳಿದ್ದು. ಆರೋಪಿಯನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಆರೋಪಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಹೊರಡಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಮಹಿಳೆ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಪೀಠ ಹೇಳಿದೆ.

ಮಹಿಳೆ ನೀಡಿದ ದೂರು ಏನು?

ಪೊಲೀಸ್ ದೂರಿನ ಪ್ರಕಾರ, ಮಹಿಳೆ ಮೊದಲು 2021 ರಲ್ಲಿ ತನ್ನ ಬಟ್ಟೆ ಬ್ರ್ಯಾಂಡ್ ನ್ನು ಪ್ರಚಾರ ಮಾಡಲು ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಹುಡುಕುವಾಗ ಈ ಯುವಕ ಕಣ್ಣಿಗೆ ಬಿದ್ದನು. ಸೋಷಿಯಲ್ ಮೀಡಿಯಾ ಮೂಲಕ ಆತನನ್ನು ಸಂಪರ್ಕಿಸಿ ಪರಿಚಯ ಸ್ನೇಹವಾಗಿ ಆತನಿಗೆ ಐಫೋನ್ ಕೊಡಿಸಿದ್ದಳು, ಆದರೆ ಆರೋಪಿಯು ಅದನ್ನು ಮರುಮಾರಾಟ ಮಾಡಲು ಪ್ರಯತ್ನಿಸಿದ ನಂತರ ಅವರ ವೃತ್ತಿಪರ ಸಂಬಂಧ ಹದಗೆಟ್ಟಿತು. ಇದನ್ನೂ ಓದಿ :ರೋಡ್​ ಶೋ ನಡೆಸಿ ಮತ್ತೆ ಜೈಲು ಸೇರಿದ್ದ ಗ್ಯಾಂಗ್​ರೇಪ್​ ಆರೋಪಿಗಳಿಂದ ಜೈಲಿನಲ್ಲಿ ದಾಂಧಲೆ

ಆತ ಮೊಬೈಲ್​ ಮಾರಾಟ ಮಾಡಿದ ಹಣದಲ್ಲಿ 20 ಸಾವಿರ ರೂಪಾಯಿಯನ್ನು ಆಕೆಗೆ ನೀಡುವುದಾಗಿ ಹೇಳಿದ್ದನು. ಆದರೆ ಆಕೆ ಯುವಕನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡಿದ್ದಳು. ಡಿಸೆಂಬರ್ 2021 ರಲ್ಲಿ, ಯುವಕ ನೋಯ್ಡಾದಲ್ಲಿರುವ ಮಹಿಳೆಯ ಮನೆಗೆ ಭೇಟಿ ನೀಡಿ 20,000 ರೂ.ಗಳನ್ನು ಹಿಂದಿರುಗಿಸಿ ಕ್ಷಮೆಯಾಚಿಸಿದ. ನಂತರ ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಲಿರುವ ಬ್ರಾಂಡ್ ಶೂಟಿಂಗ್‌ಗೆ ಪ್ರಯಾಣಿಸಲು ಆಕೆಯನ್ನು ಮನವೊಲಿಸಿದ. ಪ್ರಯಾಣದ ಸಮಯದಲ್ಲಿ, ಆರೋಪಿಯು ಆಕೆಗೆ ಮಾದಕ ದ್ರವ್ಯ ಬೆರೆಸಿದ ಸಿಹಿತಿಂಡಿಗಳನ್ನು ನೀಡಿ ಪ್ರಜ್ಞೆ ತಪ್ಪಿಸುತ್ತಾನೆ.

ಪ್ರಜ್ಞೆ ತಪ್ಪಿದ ಮಹಿಳೆಯನ್ನು ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಭರವಸೆ ನೀಡಿ ಆಕೆಯನ್ನು ಆಸ್ಪತ್ರೆಯ ಹಿಂದಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಪರ್ಸ್‌ನಿಂದ ಹಣವನ್ನು ಕದ್ದು ಆಕೆಯ ನಗ್ನ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ :ದುಬೈಗೆ ತೆರಳಲು ಅವಕಾಶ ಕೊಡಿ ಎಂದು ನ್ಯಾಯಾಲಯಕ್ಕೆ ದರ್ಶನ್​​ ಮನವಿ

ನಂತರ, ಮಹಿಳೆಯನ್ನು ಜಮ್ಮುವಿಗೆ ಪ್ರಯಾಣಿಸಲು ಒತ್ತಾಯಿಸಲಾಯಿತು, ಅಲ್ಲಿ ಎರಡೂವರೆ ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ, ಸುಲಿಗೆ ಮತ್ತು ಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿದೆ.

Exit mobile version