ಬೆಂಗಳೂರು : ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರಿನ ಜನರ ಮೇಲೆ ಸರ್ಕಾರ ಕೋಟಿಗಟ್ಟಲೆ ಟ್ಯಾಕ್ಸ್ ಹಾಕಿದ್ದಾರೆ. ಯಾರ ಮನೆ ಹಾಳು ಮಾಡಲು ಇಷ್ಟೋಂದು ಟ್ಯಾಕ್ಸ್ ಹಾಕ್ತಿದ್ದೀರಾ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಆರ್.ಅಶೋಕ್ “ಸರ್ಕಾರ ಬೆಂಗಳೂರಿನ ಜನರ ಮೇಲೆ ಈಗಾಗಲೇ ಕೋಟಿಗಟ್ಟಲೆ ಟ್ಯಾಕ್ಸ್ ಹಾಕಿದ್ದಾರೆ. ಹಾಲಿಂದ ಹಾಲ್ಕೋಹಾಲ್ವರೆಗೆ ಟ್ಯಾಕ್ಸ್ ಹಾಕಿದ್ದಾರೆ. ಕಸದಿಂದ ರಸ ಮಾಡಿಕೊಳ್ಳಲು ಸೆಸ್ ಜಾಸ್ತಿ ಮಾಡಿದ್ದಾರೆ. ಇವರು ಮನೆ ಕಟ್ಟೋರಲ್ಲ, ಮನೆ ಹಾಳು ಮಾಡೋರು. ಹಿಂದೆ ಸೆಸ್ ಅಂತ ಇತ್ತು, ಈಗ ಯೂಸರ್ ಫೀಸ್ ಮಾಡಿದ್ದಾರೆ. ಕಸದ ಟೆಂಡರ್ ಕರೆದಿರೋದು 150 ಕೋಟಿಗೆ. ಈಗ ಕಸ ಸಂಗ್ರಹಣೆಯಿಂದ 500-600 ಕೋಟಿ ಬರಲಿದೆ ಎಂದು ಹೇಳಿದರು. ಇದನ್ನೂ ಓದಿ :ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್ ಹಾಸನ್ ವಿವಾದ; ಕ್ಷಮೆ ಕೇಳಲು ಕನ್ನಡಿಗರಿಂದ ಒತ್ತಾಯ
ಮುಂದುವರಿದು ಮಾತನಾಡಿದ ಆರ್.ಅಶೋಕ್ ” ರಾಜ್ಯ ಸರ್ಕಾರ ಯಾರ ಮನೆ ಹಾಳು ಮಾಡಲು ಇಷ್ಟು ತೆರಿಗೆ ಸಂಗ್ರಹ ಮಾಡ್ತಿದ್ದೀರಿ.? ನಿಮ್ಮ ಕೆಲಸದಿಂದ ಮನೆ ಮಾಲೀಕರು ಬಾಡಿಗೆ ಹೆಚ್ಚಳ ಮಾಡ್ತಾರೆ. ಮನೆ ಮಾಲೀಕರು, ಬಾಡಿಗೆದಾರರ ನಡುವೆ ಗಲಾಟೆ ಶುರುವಾಗುತ್ತೆ. ಕಲ್ಯಾಣ ಮಂಟಪದ ದರ ಜಾಸ್ತಿ ಮಾಡ್ತಾರೆ, ಹೊಟೆಲ್ ನವರು ತಿಂಡಿ ದರ ಹೆಚ್ಚಳ ಮಾಡ್ತಾರೆ. ಇದಕ್ಕೆಲ್ಲಾ ನೀವೇ ಕಾರಣ. ನೀವು ಬೆಂಗಳೂರು ಜನರನ್ನ ಲೂಟಿ ಮಾಡಲು ಹೊರಟ್ಟಿದ್ದೀರಾ. ಇದನ್ನೂ ಓದಿ :ದುಬೈಗೆ ತೆರಳಲು ಅವಕಾಶ ಕೊಡಿ ಎಂದು ನ್ಯಾಯಾಲಯಕ್ಕೆ ದರ್ಶನ್ ಮನವಿ
ಹಿಂದೆ ನಮ್ಮ ಸರ್ಕಾರದಲ್ಲಿ ಕೆಜಿ ಲೆಕ್ಕದಲ್ಲಿ ಕಸದ ದರ ನಿಗದಿ ಮಾಡಿದ್ದೋ, ಆದರೆ ಈಗ ಸ್ಕ್ವೇರ್ ಫೀಟ್ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದೀರಾ. ಇವರಿಗೆ ಗ್ಯಾರಂಟಿಗೆ ಹಣ ಒದಗಿಸಲು ಹಣ ಬೇಕಿದೆ. ಅದನ್ನ ಒದಗಿಸೋಕೆ ತೆರಿಗೆ ಹಾಕ್ತಿದ್ದಾರೆ. ನಾವು ಆಡಳಿತಾಧಿಕಾರಿಗೆ ಮನವಿ ಮಾಡ್ತಿದ್ದೇವೆ. ನಾವು ಡಿಮ್ಯಾಂಡ್ ಮಾಡ್ತಿದ್ದೇವೆ.
5% ತೆರಿಗೆ ವಿನಾಯಿತಿ ಮುಗಿಯುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನ ವಾಪಾಸ್ ತೆಗೆದುಕೊಳ್ಳಬೇಕು. ಇಲ್ಲದಿದ್ರೆ ನಿಮಗೆ ಜನರ ಶಾಪ ತಟ್ಟಲಿದೆ ಎಂದು ಹೇಳಿದರು. ಇದನ್ನೂ ಓದಿ :ಅಬ್ದುಲ್ ರಹೀಂ ಹತ್ಯೆ ಪ್ರಕರಣ; ಕರಾವಳಿ ಮತ್ತೆ ಉದ್ವಿಘ್ನ, ಬಸ್ಗಳ ಮೇಲೆ ಕಲ್ಲು ತೂರಾಟ