Site icon PowerTV

ಆಪರೇಷನ್​ ಸಿಂಧೂರ್​ ಇನ್ನು ಮುಗಿದಿಲ್ಲ; ಭಾರತ-ಪಾಕ್‌ ಗಡಿಯಲ್ಲಿರೋ 4 ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್

ದೆಹಲಿ: ಆಪರೇಷನ್​ ಸಿಂಧೂರ್​ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದರು. ನಾಳೆ ಪಾಕ್​ಗೆ ಹೊಂದಿಕೊಂಡಿರುವ ಗುಜರಾತ್​, ಪಂಜಾಬ್​, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರದಲ್ಲಿ ಮಾಕ್​ ಡ್ರಿಲ್​ ಹಮ್ಮಿಕೊಳ್ಳಲಾಗಿದೆ.

ಆಪರೇಷನ್​ ಸಿಂಧೂರ್​ಗೆ ಮೊದಲು ಭಾರತೀಯ ಗೃಹ ಇಲಾಖೆ ಯುದ್ದದ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ಮಾಕ್​ ಡ್ರಿಲ್​ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗು ಸೂಚನೆ ಹೊರಡಿಸಿತ್ತು. ಈ ಸೂಚನೆ ಅನುಸಾರವಾಗಿ ದೇಶದ ಅನೇಕ ಜಿಲ್ಲೆಗಳಲ್ಲಿ ಮಾಕ್​ಡ್ರಿಲ್​ ಕೈಗೊಳ್ಳಲಾಗಿತ್ತು. ಆದರೆ ಇದೀಗ ಎರಡು ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿದ್ದರು ಕೂಡು ನಾಳೆ ಪಾಕ್​ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಮಾಕ್​ ಡ್ರಿಲ್​ ಕೈಗೊಳ್ಳಲಾಗಿದೆ. ಇದನ್ನೂ ಓದಿ :ಬಿಲ್​ ಕೊಡೊ ವಿಚಾರಕ್ಕೆ ಜಗಳ; ಗ್ರಾಹಕರ ಮೇಲೆ ಬಾರ್​ ಮಾಲೀಕನಿಂದ ಮಾರಣಾಂತಿಕ ಹಲ್ಲೆ

ಯುದ್ಧದ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಕ್‌ ಡ್ರಿಲ್‌ ವೇಳೆ ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿಗಳು, ನಾಗರಿಕರಿಗೆ ಸೇನೆ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ನೀಡಲಿದ್ದಾರೆ.

1971ರಲ್ಲಿ ನಡೆದಿತ್ತು ಮಾಕ್​ಡ್ರಿಲ್​..!

ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಇತ್ತೀಚೆಗೆ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಅದರಂತೆ ಬಹುತೇಕ ರಾಜ್ಯಗಳಲ್ಲಿ ಮಾಕ್‌ ಡ್ರಿಲ್ ನಡೆದಿತ್ತು.

ಮಾಕ್ ಡ್ರಿಲ್ ವೇಳೆ, ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಇದನ್ನೂ ಓದಿ :73 ವರ್ಷದ ವೃದ್ದೆಯನ್ನು ಮದುವೆಯಾಗುವುದಾಗಿ ನಂಬಿಸಿ 57 ಲಕ್ಷ ವಂಚನೆ

ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.

Exit mobile version