Site icon PowerTV

ಬಿಲ್​ ಕೊಡೊ ವಿಚಾರಕ್ಕೆ ಜಗಳ; ಗ್ರಾಹಕರ ಮೇಲೆ ಬಾರ್​ ಮಾಲೀಕನಿಂದ ಮಾರಣಾಂತಿಕ ಹಲ್ಲೆ

ಕಲಬುರಗಿ: ಬಾರ್​ವೊಂದರಲ್ಲಿ ಗ್ರಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಬಾರ್​ ಮಾಲೀಕನ ವಿರುದ್ದ ಎಫ್​ಐಆರ್ ದಾಖಲಾಗಿದೆ.

ಕಲಬುರಗಿ ಜಿಲ್ಲೆಯ, ಜೇವರ್ಗಿ ಪಟ್ಟಣದ ಬಸ್ ಡಿಪೋ ಮುಂಭಾಗದಲ್ಲಿರೋ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದ್ದು. ಮೇ 24 ರಂದು ಬಾರ್ ರೆಸ್ಟೋರೆಂಟ್‌ಗೆ ವಿಶ್ವನಾಥ, ನಿಂಗಣ್ಣ ಹಾಗೂ ರವಿ ಸೇರಿದಂತೆ ಮೂರು ಜನ ಎಣ್ಣೆ ಹೊಡೆಯಲು ಹೋಗಿದ್ದಾರೆ. ಮಧ್ಯ ಸೇವಿಸಿದ ನಂತರ ಬಳಿಕ ಬಿಲ್ ವಿಚಾರದಲ್ಲಿ ಬಾರ್ ಸಿಬ್ಬಂದಿಗಳು ಮತ್ತು ಈ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ :73 ವರ್ಷದ ವೃದ್ದೆಯನ್ನು ಮದುವೆಯಾಗುವುದಾಗಿ ನಂಬಿಸಿ 57 ಲಕ್ಷ ವಂಚನೆ

ಈ ವೇಳೆ ಮಾತು ವಿಕೋಪಕ್ಕೆ ಹೋಗಿ ಬಾರ್ ಸಿಬ್ಬಂದಿಗಳು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಬಾರ್ ಮಾಲೀಕ ಸಂತೋಷ್ ಗುತ್ತೇದಾರ್, ಸಂತೋಷ್ ಗುತ್ತೇದಾರ್ ಅಳಿಯ ಭೀಮಯ್ಯ ಸೇರಿಕೊಂಡು ಅರೆಬೆತ್ತಲೆ ಮಾಡಿ ದರ ದರನೇ ಬಾರ್‌ವೊಳಗೆ ಎಳೆದುಕೊಂಡು ಹೋಗಿ ಬೆಲ್ಟ್, ಹಾಕಿ ಸ್ಟಿಕ್, ಸ್ಟಂಪ್‌ನಿಂದ ಮನಸ್ಸೋಇಚ್ಛೆ ಥಳಿಸಿದ್ದಾರೆ.

ಇನ್ನೂ ಜೇವರ್ಗಿ ಪಟ್ಟಣದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ ನಲ್ಲಿ ಬಾರ್ ಮಾಲೀಕ ಸಂತೋಷ್ ಗುತ್ತೇದಾರ್ ಮತ್ತು ಸಿಬ್ಬಂದಿಗಳು ಮೂವರು ಗ್ರಾಹಕರ ಮೇಲೆ ಮೆರೆದು ಕ್ರೌರ್ಯದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತ ಮೂವರ ಪೈಕಿ ಅತೀ ಹೆಚ್ಚು ಹಲ್ಲೆಗೊಳಗಾದ ವಿಶ್ವರಾಧ್ಯನನ್ನ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ :ಸಂಸತ್​ನಲ್ಲಿ ಮುಸ್ಲಿಂ ಸಂಸದೆಗೆ ಕಿರುಕುಳ; ಮಧ್ಯ ಸೇವಿಸಿ, ಟೇಬಲ್​ ಮೇಲೆ ಡ್ಯಾನ್ಸ್​ ಮಾಡುವಂತೆ ಒತ್ತಡ

ಇನ್ನೂ ಯುವಕರ ಮೇಲೆ ಕ್ರೌರ್ಯ ಮೆರೆದ ಘಟನೆಗೆ ಸಂಬಂಧಿಸಿದಂತೆ, ದುರ್ಗಾ ಬಾರ್ ಮಾಲೀಕ ಸಂತೋಷ್ ಗುತ್ತೇದಾರ್, ಸಂತೋಷ್ ಗುತ್ತೇದಾರ್ ಅಳಿಯ ಭೀಮಯ್ಯ ಗುತ್ತೇದಾರ್, ಸಿಬ್ಬಂದಿ ಪರಶುರಾಮ್ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಾರ್ ಮಾಲೀಕ ಸಂತೋಷ್ ಗುತ್ತೇದಾರ್ ಅಳಿಯ ಭೀಮಯ್ಯ, ಸಿಬ್ಬಂದಿ ಪರಶುರಾಮ್‌ನನ್ನ ಬಂಧಿಸಲಾಗಿದೆ.

Exit mobile version