Site icon PowerTV

ಅವೈಜ್ಞಾನಿಕವಾಗಿ ವಾಹನ ತಡೆದಿದ್ದಾರೆ; ಮಂಡ್ಯ ಘಟನೆ ತಲೆ ತಗ್ಗಿಸುವಂತದ್ದು; ಪರಮೇಶ್ವರ್​

ಮಂಡ್ಯ : ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ‘ ಪೊಲೀಸರು ಅವೈಜ್ಞಾನಿಕವಾಗಿ ವಾಹನ ತಡೆಯೋದು ಬೇಡ, ಮಂಡ್ಯದಲ್ಲಿ ನಡೆದ ಘಟನೆ ತಲೆ ತಗ್ಗಿಸುವಂತದ್ದು’ ಎಂದು ಹೇಳಿದರು.

ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ ನಿನ್ನೆ ಮಂಡ್ಯದಲ್ಲಿ 3 ವರ್ಷದ ಋತೀಕ್ಷ್​ ಎಂಬ ಮಗು ಸಾವನ್ನಪ್ಪಿದ್ದು. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸಾರ್ವಜನಿಕರು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಈ ಇಂದು ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್​ ” ಮಂಡ್ಯ ಘಟನೆ ತಲೆತಗ್ಗಿಸುವಂಥದ್ದು. ಇಂಥ ಘಟನೆಗಳು ಮುಂದೆ ಆಗದಂತೆ ಕ್ರಮವಹಿಸುತ್ತೇವೆ. ಘಟನೆಗೆ ಕಾರಣರಾದ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ :ಕೋವಿಡ್​ ಹೆಚ್ಚಳ; 50 ವರ್ಷ ಮೇಲ್ಪಟ್ಟವರಿಗೆ​​ ಮಾಸ್ಕ್​ ಕಡ್ಡಾಯ, ಆರೋಗ್ಯ ಸಿಬ್ಬಂದಿ ರಜೆ ಕಟ್​

ಮುಂದುವರಿದು ಮಾತನಾಡಿದ ಪರಮೇಶ್ವರ್ “ಇವತ್ತು ಆಧಿಕಾರಿಗಳ ಸಭೆ ಕರೆದಿದ್ದೇನೆ, ಅಧಿಕಾರಿಗಳ ಜತೆ ಚರ್ಚೆ ನಡೆಸ್ತೇನೆ. ಪೊಲೀಸರು ನಿನ್ನೆ ಮಾನವೀಯತೆ ತೋರಲಿಲ್ಲ, ಸ್ವಂತಿಕೆ ಪ್ರದರ್ಶಿಸಲಿಲ್ಲ. ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯೋದು ಬೇಡ.  ಎಲ್ಲೋ ಮೂಲೆಯಲ್ಲಿ ನಿಂತು ಏಕಾಏಕಿ ಬಂದು ವಾಹನ ತಡೀತಾರೆ. ಪೊಲೀಸರು ಈ ರೀತಿ ಮಾಡಬಾರದು, ವಾಹನ ಸವಾರರನ್ನು ಪರಿಶೀಲಿಸಲು ಒಂದು ಪದ್ದತಿ ಇದೆ, ಆ ಪದ್ದತಿಯನ್ನ ಪೊಲೀಸರು ಅನುಸರಿಸಬೇಕು. ಇದನ್ನೂ ಓದಿ :ಕನ್ನಡ ಕಿರುತೆರೆಯ ಖ್ಯಾತ ನಟ ಶ್ರೀಧರ್​ ನಿಧನ

ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಇದರೆಲ್ಲದರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ವಾಹನ ಸವಾರರು ಸ್ಪೀಡಾಗಿ ಬರ್ತಿರ್ತಾರೆ, ಆಗ ಹೋಗಿ ತಡೆಯುವ ಕೆಲಸ ಪೊಲೀಸರು ಮಾಡ್ತಾರೆ,‌ ಇದು ನಿಲ್ಲಬೇಕು. ಇವತ್ತು ಇದೆಲ್ಲದರ ಬಗ್ಗೆ ಚರ್ಚಿಸಿ ಸೂಚನೆ ಕೊಡ್ತೇವೆ ಎಂದು ಗೃಹ ಸಚಿವ ಪರಮೇಶ್ವರ್​ ಹೇಳಿಕೆ ನೀಡಿದರು.

Exit mobile version