Site icon PowerTV

ಶ್ರೀಧರ್​ ನಾಯಕ್​ಗೆ ಏಡ್ಸ್​ ಬಂದಿತ್ತು, ಆತನ ಅಹಂಕಾರದಿಂದ ಎಲ್ಲ ಕಳೆದುಕೊಂಡ; ಪತ್ನಿ ಜ್ಯೋತಿ ಆಡಿಯೋ

ಕಿರುತೆರೆ ಖ್ಯಾತ ನಟ ಶ್ರೀಧರ್​ ನಾಯಕ್​ ಅವರು ನಿಧನ ಹೊಂದಿದ್ದು, ಇದರ ನಡುವೆ ಶ್ರೀಧರ್​ ಅವರ ಪತ್ನಿ ಜ್ಯೋತಿ ಅವರ ಹಳೆಯ ಆಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶ್ರೀಧರ್ ಪತ್ನಿ ತಮ್ಮ ಕೌಟುಂಬಿಕ ಕಲಹದ ಬಗ್ಗೆ ವಿವರಿಸಿದ್ದು. ಶ್ರೀಧರ್​ಗೆ HIV ಮತ್ತು ಕ್ಯಾನ್ಸರ್​ ಇತ್ತು. ಇದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಜ್ಯೋತಿ ಅವರು ತಿಳಿಸಿದ್ದಾರೆ.

ಕಿರುತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದ ಶ್ರೀಧರ್​ ನಾಯಕ್​ ಸಾವಿನಿಂದ ಕಿರುತೆರೆ ಲೋಕದಲ್ಲಿ ಸೂತಕದ ಛಾಯೆ ಆವರಿಸಿದೆ. ಇದರ ನಡುವೆ ಶ್ರೀಧರ್ ಅವರ ಪತ್ನಿ ಜ್ಯೋತಿ ಅವರದ್ದು ಎನ್ನಲಾದ ಆಡಿಯೋ ವೈರಲ್​ ಆಗಿದೆ. ಈ ಆಡಿಯೋದಲ್ಲಿ  ‘ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು’ ಎಂದು ಮಾತು ಆರಂಭಿಸಿದ್ದಾರೆ. ಇದನ್ನೂ ಓದಿ :ಸಾಲಭಾದೆ; ಕಾರ್​ನಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ 7 ಮಂದಿ ಆತ್ಮಹ*ತ್ಯೆ

‘ಆದರೆ ಮದುವೆಯಾದ ಒಂದು ತಿಂಗಳಲ್ಲೇ ಶ್ರೀಧರ್ ಬದಲಾದ. ರಿಸ್ಟ್ರಿಕ್ಷನ್ ಹಾಕಲು ಆರಂಭಿಸಿದ. ಇದೆಲ್ಲವೂ ಅಬ್​ನಾರ್ಮಲ್ ಆಗಿತ್ತು. 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಸಾಧ್ಯವಿಲ್ಲ. ಅವನು ನನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡೆ. ಆದರೆ, ಪ್ರೀತಿಸಿಲ್ಲ. ಇದನ್ನು ಅವನೇ ಒಂದು ದಿನ ಹೇಳಿದ್ದ. ಹೀಗೆಲ್ಲ ಆಯ್ತಾ ಎಂದು ಹೇಳಿದರೆ ಯಾರೂ ನಂಬಲ್ಲ. ಅವನು ಸಾಕಷ್ಟು ಬಾರಿ ಹೊಡೆದಿದ್ದಾನೆ. ಆದರೆ, ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’. ಇದನ್ನೂ ಓದಿ :‘ನಾಲಾಯಕ್​ ಜೋಕರ್​ಗಳು ನಮ್ಮ ಜೊತೆ ಯುದ್ದ ಮಾಡ್ತಾರಂತೆ’; ಪಾಕಿಸ್ತಾನವನ್ನ ಟ್ರೋಲ್ ಮಾಡಿದ ಓವೈಸಿ

‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಆದರೆ, ನಡೆದಿದೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ. ಆದರೆ ಅವನಿಗೆ ಸಾಕಷ್ಟು ಜನರ ಜೊತೆ ಲೈಂಗಿಕ ಸಂಬಂಧವಿತ್ತು. ಅವನಿಗೆ ಎಚ್​ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ’ ಎಂಬ ಮಾತನ್ನು ಅವರು ಹೇಳಿದ್ದರು.

ಮುಂದುವರಿದು ಮಾತನಾಡಿರುವ ಜ್ಯೋತಿ “ತುಂಬಾ ವೈದ್ಯರ ಬಳಿ ಕೇಳಿದ್ದೆ. ಅದಕ್ಕೆ ಏನಾದರೂ ಔಷಧ ಇದೆಯೇ? ಕ್ಯೂರ್ ಮಾಡಬಹುದೇ ಎಂದು ಕೇಳಿದ್ದೆ. ಅವನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು. ನಾನೊಬ್ಬ ಆರ್ಟಿಸ್ಟ್​ ಅಂತ ಆತ ಮೆರೆಯುತ್ತಿದ್ದ, ಆತನ ಅಹಂಕಾರ ಮತ್ತು ಆತನ ಸ್ವಭಾವದಿಂದ ಆತ ಎಲ್ಲವನ್ನು ಕಳೆದುಕಂಡ. ಇದಕ್ಕೆಲ್ಲಾ ಅವನೇ ಕಾರಣ. ನನ್ನ ಕಾರಣಕ್ಕೆ ಏಡ್ಸ್ ಬಂದಿಲ್ಲ’ ಎಂದಿದ್ದಾರೆ.ಇದನ್ನೂ ಓದಿ :ಆಪರೇಷನ್​ ಸಿಂಧೂರ್ ಸಕ್ಸಸ್​; IPL ಫೈನಲ್​ ಪಂದ್ಯಕ್ಕೆ ಸೇನಾ ಮುಖ್ಯಸ್ಥರಿಗೆ BCCI ಆಹ್ವಾನ

ಕೊನೆಯದಾಗಿ ಮಾತನಾಡಿರುವ ಅವರು ” 11 ವರ್ಷದಲ್ಲಿ ನಾನು ಶ್ರೀಧರ್​ ಬಳಿ ಹೆಚ್ಚೆಂದರೆ 4 ಸೀರೆ ಕೇಳಿದ್ದೇನೆ, ಶ್ರೀಧರ್​ 5 ವರ್ಷದ ಮಗ ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದರು. ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡುತ್ತಿದ್ದರು, ಆದರೆ ನಾನು ಇಷ್ಟು ದಿನ ಇವೆಲ್ಲವನ್ನು ಯಾರಲ್ಲೂ ಹೇಳಿರಲಿಲ್ಲ. ಈಗ ಈ ನೋವನ್ನು ಹೇಳಿಕೊಂಡಷ್ಟು ಹೆಚ್ಚು ನೋವಾಗುತ್ತಿದೆ. ನನ್ನ ಜಾಗದಲ್ಲಿ ಬೇರೆ ಯಾರದಾರು ಇದ್ದಿದ್ದರೆ ಅವರು ಏನಾದರು ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

Exit mobile version