Site icon PowerTV

ಆಪರೇಷನ್​ ಸಿಂಧೂರ್ ಸಕ್ಸಸ್​; IPL ಫೈನಲ್​ ಪಂದ್ಯಕ್ಕೆ ಸೇನಾ ಮುಖ್ಯಸ್ಥರಿಗೆ BCCI ಆಹ್ವಾನ

ಆಪರೇಷನ್ ಸಿಂಧೂರ್‌ಗೆ ಗೌರವವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರನ್ನು IPL2025ರ ಫೈನಲ್‌ಗೆ ಹಾಜರಾಗಲು ಆಹ್ವಾನಿಸಿದೆ ಎಂದು ಪಿಟಿಐ  ವರದಿ ಮಾಡಿದೆ. ಐಪಿಎಲ್ 2025 ರ ಫೈನಲ್ ಪಂದ್ಯವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಸೇನಾ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ.

ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಭಾರತ ನಡೆಸಿದ ಕಾರ್ಯಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳ ನಾಶಗೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದರು. ಇದರ ಗೌರವಾರ್ಥ  ಭಾರತೀಯ ಸಶಸ್ತ್ರ ಪಡೆಗಳ “ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆ”ಗೆ ವಂದಿಸುತ್ತದೆ ಎಂದು ಸೈಕಿಯಾ ಹೇಳಿದರು. ಇದನ್ನೂ ಓದಿ :‘ನಾಲಾಯಕ್​ ಜೋಕರ್​ಗಳು ನಮ್ಮ ಜೊತೆ ಯುದ್ದ ಮಾಡ್ತಾರಂತೆ’; ಪಾಕಿಸ್ತಾನವನ್ನ ಟ್ರೋಲ್ ಮಾಡಿದ ಓವೈಸಿ

ಇದರ “ಗೌರವ ಸೂಚಕವಾಗಿ, ನಾವು ಸಮಾರೋಪ ಸಮಾರಂಭವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಿರ್ಧರಿಸಿದ್ದೇವೆ. ಕ್ರಿಕೆಟ್ ರಾಷ್ಟ್ರೀಯ ಉತ್ಸಾಹವಾಗಿ ಉಳಿದಿದ್ದರೂ, ರಾಷ್ಟ್ರ ಮತ್ತು ಅದರ ಸಾರ್ವಭೌಮತ್ವ, ಸಮಗ್ರತೆ ಮತ್ತು ನಮ್ಮ ದೇಶದ ಭದ್ರತೆಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಸೈಕಿಯಾ ಹೇಳಿದರು.

ಭಾರತೀಯ ಕ್ರಿಕೆಟ್ ಮಂಡಳಿ ನೀಡಿರುವ ಆಹ್ವಾನದ ಮೇರೆಗೆ, ಜನರಲ್ ಉಪೇಂದ್ರ ದ್ವಿವೇದಿ (ಸೇನಾ ಮುಖ್ಯಸ್ಥ), ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ (ನೌಕಾಪಡೆ ಮುಖ್ಯಸ್ಥ) ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಐಪಿಎಲ್​ 2025ರ ಫೈನಲ್‌ಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: ಬುರ್ಕಾದಾರಿ ಮಹಿಳೆಗೆ ಮುತ್ತಿಟ್ಟು ಪರಾರಿ; ಯುಪಿ ಪೊಲೀಸರಿಂದ ಆರೋಪಿಗೆ ಲಾಠಿ ರುಚಿ

ಮೇ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಮೇ 10 ರಂದು ಒಪ್ಪಂದವಾದ ಕದನ ವಿರಾಮದ ನಂತರ ಮೇ 17 ರಂದು ಪಂದ್ಯಾವಳಿ ಪುನರಾರಂಭಗೊಳಿಸಲಾಯಿತು.

Exit mobile version