Site icon PowerTV

‘ನಾಲಾಯಕ್​ ಜೋಕರ್​ಗಳು ನಮ್ಮ ಜೊತೆ ಯುದ್ದ ಮಾಡ್ತಾರಂತೆ’; ಪಾಕಿಸ್ತಾನವನ್ನ ಟ್ರೋಲ್ ಮಾಡಿದ ಓವೈಸಿ

ಕುವೈತ್: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿ ಮತ್ತು ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಜಾಗತಿಕ ಸಮುದಾಯಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಭಾರತದ ನಿಯೋಗ ಕುವೈತ್​ಗೆ ತೆರಳಿದ್ದು. ಇಲ್ಲಿ ಮಾತನಾಡಿದ ಅಸಾದುದ್ದೀನ್​ ಓವೈಸಿ ಪಾಕಿಸ್ತಾನದ ಸೇನೆ ಮತ್ತು ಸರ್ಕಾರವನ್ನು ನಾಲಾಯಕ್​ ಜೋಕರ್​ಗಳು ಎಂದು ಕರೆದಿದ್ದಾರೆ.

ಇದನ್ನೂ ಓದಿ :ಬುರ್ಕಾದಾರಿ ಮಹಿಳೆಗೆ ಮುತ್ತಿಟ್ಟು ಪರಾರಿ; ಯುಪಿ ಪೊಲೀಸರಿಂದ ಆರೋಪಿಗೆ ಲಾಠಿ ರುಚಿ

2019ರಲ್ಲಿ ಚೀನಾ ನಡೆಸಿದ್ದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ, ಭಾರತದ ವಿರುದ್ದ ನಡೆಸಿದ ಕಾರ್ಯಚರಣೆ ಎಂದು ಬಿಂಬಿಸಿ ಪಾಕ್​ ಪ್ರಧಾನಿಗೆ, ಫೈಲ್ಡ್​ ಮಾರ್ಷಲ್​ ಅಸೀಮ್​ ಮುನಿರ್​ ಪೋಟೊವೊಂದನ್ನು ಗಿಫ್ಟ್​ ನೀಡಿದ್ದು. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರು ಉಂಟು ಮಾಡಿತ್ತು. ಇದನ್ನ ಉಲ್ಲೇಖಿಸಿ AIMIM ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಪಾಕಿಸ್ತಾನವನ್ನ ಪುಲ್​ ರೋಸ್ಟ್​ ಮಾಡಿದ್ದು, ‘ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ’? ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ಕಾಫಿ ಮಾಡಲು, ಬುದ್ದಿ ಇಲ್ಲದ ಮೂರ್ಖರು..!</st

ಮುಂದುವರಿದು ಮಾತನಾಡಿದ ಓವೈಸಿ ‘ಶಾಲೆಯಲ್ಲಿ ಚೆನ್ನಾಗಿ ಓದುವ ಮಕ್ಕಳ ಜೊತೆ ದಡ್ಡ ವಿದ್ಯಾರ್ಥಿಗಳು ಕಾಫಿ ಮಾಡಲು ನೋಡುತ್ತಿರುತ್ತಾರೆ. ಆದರೆ ಪಾಕಿಸ್ತಾನಕ್ಕೆ ಕಾಫಿ ಮಾಡುವಷ್ಟು ಬುದ್ದಿವಂತಿಕೆ ಇಲ್ಲ. ಇಂತಹ ಜೋಕರ್ ದೇಶ ಏನು ಮಾಡುತ್ತದೆಯೋ ಅದನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸಬೇಡಿ ಎಂದು ಓವೈಸಿ ಹೇಳಿದರು. ಇದನ್ನೂ ಓದಿ :ಸರ್ಧಾರ ಪಟೇಲರ ಸಲಹೆ ಸ್ವೀಕರಿಸಿದ್ದರೆ, ಕಾಶ್ಮೀರದಲ್ಲಿ ಉಗ್ರ ದಾಳಿಗಳು ನಡೆಯುತ್ತಿರಲಿಲ್ಲ : ಮೋದಿ

ಸೇನಾ ಸಂಘರ್ಷ ‘ಪಾಕಿಸ್ತಾನ ಸೃಷ್ಟಿಸಿದ ಸಮಸ್ಯೆ’

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ನೈಜ ಮುಖವನ್ನು ಬಹಿರಂಗಪಡಿಸಲು ವಿದೇಶ ಪ್ರವಾಸದಲ್ಲಿರುವ ಸರ್ವಪಕ್ಷ ನಿಯೋಗದ ಭಾಗವಾಗಿರುವ AIMIM ನಾಯಕ ಓವೈಸಿ. ಇದಕ್ಕೂ ಮೊದಲು ಬಹ್ರೇನ್‌ನಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ‘ಪಾಕಿಸ್ತಾನ ಸೃಷ್ಟಿಸಿದ ಸಮಸ್ಯೆ’ ಎಂದು ಒವೈಸಿ ಕರೆದರು.

ಇದನ್ನೂ ಓದಿ :ಬೈಕ್​ ಸವಾರನ ಮೇಲೆ ಉರುಳಿದ ಬೃಹತ್​ ಮರ; BBMP ವಿರುದ್ದ ಎಫ್​ಐಆರ್​ ದಾಖಲು

‘ಕಳೆದ ಹಲವಾರು ವರ್ಷಗಳಿಂದ ಭಾರತ ಎದುರಿಸುತ್ತಿರುವ ಬೆದರಿಕೆಯನ್ನು ಜಗತ್ತಿಗೆ ತಿಳಿಸಲು ನಮ್ಮ ಸರ್ಕಾರ ನಮ್ಮನ್ನು ಇಲ್ಲಿಗೆ ಕಳುಹಿಸಿದೆ. ದುರದೃಷ್ಟವಶಾತ್, ನಾವು ಅನೇಕ ಮುಗ್ಧ ಜನರ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಸಮಸ್ಯೆ ಪಾಕಿಸ್ತಾನದಿಂದ ಹುಟ್ಟಿಕೊಂಡಿದೆ ಮತ್ತು ಯಾವಾಗಲೂ ಸಂಭವಿಸುತ್ತದೆ. ಪಾಕಿಸ್ತಾನ ಈ ಭಯೋತ್ಪಾದಕ ಗುಂಪುಗಳನ್ನು ಉತ್ತೇಜಿಸುವುದು, ಸಹಾಯ ಮಾಡುವುದು ಮತ್ತು ಪ್ರಾಯೋಜಿಸುವುದನ್ನು ನಿಲ್ಲಿಸದ ಹೊರತು, ಈ ಸಮಸ್ಯೆ ದೂರವಾಗುವುದಿಲ್ಲ. ಅವರು ಮುಂದಿನ ಬಾರಿ ಧೈರ್ಯ ಮಾಡಿದರೆ, ನಾವು ಇದೇ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ…’ ಎಂದು ಹೇಳಿದರು.

Exit mobile version