Site icon PowerTV

ಶಿವಣ್ಣ, ದರ್ಶನ್‌ ಬಗ್ಗೆ ಅವಹೇಳನಕಾರಿ ಹೇಳಿಕೆ: ಕನ್ನಡ ಚಿತ್ರರಂಗದಿಂದ ಮಡೆನೂರು ಮನು ಬ್ಯಾನ್

ಕಾಮಿಡಿ ಕಿಲಾಡಿಗಳು ಸೀಸನ್ ಖ್ಯಾತಿಯ ಮಡೆನೂರು ಮನು ವಿರುದ್ದ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಂಡಿದ್ದು, ನಟನನ್ನು ಚಿತ್ರರಂಗದಿಂದ ಬ್ಯಾನ್​ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಮಡೆನೂರು ಮನು ಅಭಿನಯದ ಮೊದಲ ಸಿನಿಮಾನೇ, ಕೊನೆಯ ಸಿನಿಮಾ ಆಗಿದೆ.

ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರಿಲೀಸ್ ಮುನ್ನ ದಿನವೇ ಮನು ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದರು. ಹೀಗಿರುವಾಗಲೇ ಮಡೆನೂರು ಮನುಗೆ ಮತ್ತೊಂದು ದೊಡ್ಡ ಶಾಕ್​ ಎದುರಾಗಿದೆ, ಕನ್ನಡದ ಹಿರಿಯ ನಟರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ಬ್ಯಾನ್​ ಮಾಡಲಾಗಿದೆ. ಇದನ್ನೂ ಓದಿ :ಪಕ್ಷ ವಿರೋಧಿ ಚಟುವಟಿಕೆ: ಶಾಸಕ ಎಸ್​ಟಿ ಸೋಮಶೇಖರ್​, ಶಿವರಾಂ ಹೆಬ್ಬಾರ್​ BJPಯಿಂದ ಉಚ್ಚಾಟನೆ

ಶಿವರಾಜ್ ಕುಮಾರ್‌, ದರ್ಶನ್‌, ಧ್ರುವ ಸರ್ಜಾ ಬಗ್ಗೆ ತುಚ್ಛ ಮಾತು!

ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋವೊಂದನ್ನ ಸಂತ್ರಸ್ತ ಕಿರುತೆರೆ ನಟಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದರು. ಆ ಆಡಿಯೋದಲ್ಲಿ ಶಿವಣ್ಣ, ದರ್ಶನ್‌, ಧ್ರುವ ಸರ್ಜಾ ಬಗ್ಗೆ ಮಡೆನೂರು ಮನು ಮಾತನಾಡಿದ್ದಾರೆ ಅಂತ ಹೇಳಲಾಗಿದೆ. ಆ ಆಡಿಯೋಗೆ ಮಡೆನೂರು ಮನು ಫೋಟೋ ಹಾಕಿ ‘ದುರಹಂಕಾರ’ ಅಂತ ಕಿರುತೆರೆ ನಟಿ ಕ್ಯಾಪ್ಷನ್ ಕೊಟ್ಟಿದ್ದರು.
ಇದನ್ನೂ ಓದಿ :ಶ್ರೀಧರ್​ ನಾಯಕ್​ಗೆ ಏಡ್ಸ್​ ಬಂದಿತ್ತು, ಆತನ ಅಹಂಕಾರದಿಂದ ಎಲ್ಲ ಕಳೆದುಕೊಂಡ; ಪತ್ನಿ ಜ್ಯೋತಿ ಆಡಿಯೋ

ಇದನ್ನೂ ಓದಿ :ಸಾಲಭಾದೆ; ಕಾರ್​ನಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ 7 ಮಂದಿ ಆತ್ಮಹ*ತ್ಯೆ

Exit mobile version