Site icon PowerTV

ಕೋವಿಡ್​ ಹೆಚ್ಚಳ; 50 ವರ್ಷ ಮೇಲ್ಪಟ್ಟವರಿಗೆ​​ ಮಾಸ್ಕ್​ ಕಡ್ಡಾಯ, ಆರೋಗ್ಯ ಸಿಬ್ಬಂದಿ ರಜೆ ಕಟ್​

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಹೆಚ್ಚಳವಾದ ಹಿನ್ನಲೆ ರಾಜ್ಯ ಸರ್ಕಾರ ಅಲರ್ಟ್​ ಆಗಿದ್ದು. 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ ಆರೋಗ್ಯ ಇಲಾಖೆ ಮಾಸ್ಕ್​ ಕಡ್ಡಾಯಗೊಳಿಸಿದೆ. ಜೊತೆಗೆ ಪರಿಸ್ಥಿತಿ ತಿಳಿಯಾಗುವವರೆಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ರಜೆ  ಕಟ್​ ಮಾಡಲಾಗಿದೆ.

ರಾಜ್ಯದಲ್ಲಿ ಕೋವಿಡ್​ ಮಹಾಮಾರಿ ಆರ್ಭಟ ಹೆಚ್ಚಾಗುವ ಮೊದಲೇ ಆರೋಗ್ಯ ಇಲಾಖೆ ಸುರಕ್ಷತ ಕ್ರಮಗಳ ಕಡೆಗೆ ಗಮನ ಹರಿಸಿದ್ದು. ಕೊವಿಡ್ ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಇದರಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್​ ಕಡ್ಡಾಯಗೊಳಿಸಿದ್ದು. ಹಿರಿಯ ನಾಗರಿಕರಿಗೆ ಕೊವಿಡ್ ಅಪಾಯವಿರುವ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಸಭೆ ಬಳಿಕ ಹಿರಿಯ ನಾಗರಿಕರಿಗೆ ಮಾಸ್ಕ್​ ಕಡ್ಡಾಯಕ್ಕೆ ಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ :ಕನ್ನಡ ಕಿರುತೆರೆಯ ಖ್ಯಾತ ನಟ ಶ್ರೀಧರ್​ ನಿಧನ

ಏರಿಕೆಯತ್ತ ಸಾಗುತ್ತಿದೆ ಕೋವಿಡ್​ ಮಹಾಮಾರಿ..!

ರಾಜ್ಯದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು. ಸದ್ಯ ರಾಜ್ಯದಲ್ಲಿ 80 ಕೋವಿಡ್​ ಸಕ್ರಿಯ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 191 ಕೋವಿಡ್​ ಟೆಸ್ಟ್​ ಮಾಡಿದ್ದು. ಇದರಲ್ಲಿ 37 ಜನರಲ್ಲಿ ಕೋವಿಡ್​ ಪಾಸಿಟಿವ್​ ಬಂದಿದೆ. 80 ಜನರಲ್ಲಿ 76 ಜನ ಹೋಮ್​ ಐಸೋಲೇಷನ್​ನಲ್ಲಿದ್ದು. ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕೋವಿಡ್​ ಪಾಸಿಟಿವ್​ ರೇಟ್​ 19.37ರಷ್ಟಿದೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್​ ಬುಲೆಟಿನ್​ನಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ :ಮೋದಿ ರೋಡ್​ ಶೋನಲ್ಲಿ ಆಫ್ರಿಕನ್​ ವಿದ್ಯಾರ್ಥಿಗಳು; ಉಗ್ರರ ನಿರ್ಮೂಲನೆ ಮಾಡುವಂತೆ ಕೋರಿಕೆ

ಬೆಂಗಳೂರಲ್ಲೇ ಅತಿ ಹೆಚ್ಚಿನ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು. ಬೆಂಗಳೂರಲ್ಲಿ 73 ಕೊವಿಡ್ ಸಕ್ರಿಯ ಪ್ರಕರಣಗಳು. ಮೈಸೂರಲ್ಲಿ 3 ಪ್ರಕರಣ, ಬೆಂಗಳೂರು ಗ್ರಾಮಾಂತರ 2, ದಕ್ಷಿಣ ಕನ್ನಡ 1, ವಿಜಯನಗರದಲ್ಲಿ 1ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳ ರಜೆ ಕಟ್​..!

ಕೋವಿಡ್ ಆತಂಕ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ಕಟ್ ಮಾಡಲಾಗಿದ್ದು.  ಪರಿಸ್ಥಿತಿ ತಿಳಿ ಆಗುವ ತನಕ ರಜೆ ಕೊಡದಂತೆ ಸೂಚನೆ ಆರೋಗ್ಯ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ಜೊತೆಗೆ ವೈದ್ಯರು ತಮ್ಮ ಕೇಂದ್ರ ಸ್ಥಾನ ಬಿಟ್ಟುಹೋಗದಂತೆ ಸೂಚನೆ ನೀಡಲಾಗಿದೆ.

Exit mobile version