Site icon PowerTV

ಗುಜರಾತ್​ನಲ್ಲಿ ಮೋದಿ ರೋಡ್​ಶೋ; ಕರ್ನಲ್ ಸೋಫಿಯಾ ಕುಟುಂಬಸ್ಥರಿಂದ ಮೋದಿಗೆ ಪುಷ್ಪವೃಷ್ಟಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನಲ್ಲಿ ರೋಡ್​ ಶೋ ನಡೆಸಿದ್ದು. ಈ ರೋಡ್​ ಶೋನಲ್ಲಿ ಆಪರೇಷನ್​ ಸಿಂಧೂರದ ಭಾಗವಾಗಿದ್ದ ಕರ್ನಲ್​ ಸೋಫಿಯಾ ಖುರೇಷಿ ಅವರ ಕುಟುಂಬಸ್ಥರು ಭಾಗಿಯಾಗಿ ಮೋದಿ ಮೇಲೆ ಪುಷ್ಪವೃಷ್ಟಿ ನಡೆಸಿದ್ದಾರೆ. ಇದನ್ನೂ ಓದಿ:ಮುಂಗಾರು ಮಳೆಗೆ ಮಂಗಳೂರು ತತ್ತರ; ವಿಪತ್ತು ನಿರ್ವಹಣೆ NDRF ತಂಡಗಳಿಂದ ಸಿದ್ದತೆ

ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕಾರ್ಯಕ್ರಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಹತ್ತಿರ ಬರುತ್ತಿದ್ದಾಗ ಸೋಫಿಯಾ ತಾಯಿ ಹಲೀಮಾ ಬೀಬಿ ಸೇರಿದಂತೆ ಕುಟುಂಬ ಸದಸ್ಯರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಕರ್ನಲ್​ ಸೋಫಿಯಾ ಖುರೇಷಿ ಅವರ ತಾಯಿ ಹಲೀಮಾ ಬೀಬಿ ‘ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದನ್ನು ನೋಡಿ ಸಂತೋಷವಾಯಿತು. ಮಹಿಳೆಯರು ಮತ್ತು ಸಹೋದರಿಯರು ಆಪರೇಷನ್ ಸಿಂಧೂರ ಬಗ್ಗೆ ಸಂತೋಷಪಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ಬ್ಲಿಂಕ್ ತಂಡದಿಂದ ವಿನೂತನ ಪ್ರಯೋಗ; ಹಾರರ್ ಫಿಲಂ ಟೀಸರ್ ಬಿಡುಗಡೆ

ಇನ್ನು ಸೋಫಿಯಾ ಖುರೇಷಿ ಅವರ ಸಹೋದರಿ ಶೈನಾ ಸುನ್ಸಾರಾ ಅವರು ಮಾತನಾಡಿ “ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಬಹಳಷ್ಟು ಕೆಲಸ ಮಾಡಿದ್ದಾರೆ. ಸೋಫಿಯಾ ನನ್ನ ಅವಳಿ ಸಹೋದರಿ. ಸಹೋದರಿ ದೇಶಕ್ಕಾಗಿ ಏನಾದರೂ ಮಾಡಿದಾಗ, ಅದು ನನಗೆ ಮಾತ್ರವಲ್ಲದೆ ಇತರರಿಗೂ ಸ್ಫೂರ್ತಿ ನೀಡುತ್ತದೆ. ಆಕೆ ಇನ್ನು ಮುಂದೆ ನನ್ನ ಸಹೋದರಿ ಮಾತ್ರವಲ್ಲ, ದೇಶದ ಸಹೋದರಿ ಎಂದು ಹೇಳಿದರು. ಇದನ್ನೂ ಓದಿ: 

 

Exit mobile version