ಮಂಗಳೂರು : ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದ್ದೆ ತಡ ರಾಜ್ಯದ ಹಲವಡೆ ಭಾರಿ ಮಳೆಯಾಗುತ್ತಿದ್ದು. ಕರಾವಳಿ ಜಿಲ್ಲೆ ಮಂಗಳೂರಿನಲ್ಲೂ ನಿರಂತರ ಮಳೆಯಾಗುತ್ತಿದೆ. ಭಾರಿ ಮಳೆಗೆ ಕಲ್ಲಡ್ಕ ಫ್ಲೈಓವರ್ ಜಲಪಾತವಾಗಿ ಬದಲಾಗಿದ್ದು. ವಿಪತ್ತು ನಿರ್ವಹಣೆಗೆ ಎಸ್ಡಿಆರ್ಎಪ್ ಮತ್ತು ಎನ್ಡಿಆರ್ಎಫ್ ತಂಡಗಳು ಮಂಗಳೂರಿಗೆ ಆಗಮಿಸಿವೆ.
ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಎಂದಿನಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಫ್ಲೈ ಓವರ್ ಮೇಲೆ ನೀರು ಸಂಗ್ರಹವಾಗಿದ್ದು. ಫ್ಲೈ ಓವರ್ ಮೇಲಿಂದ ನೀರು ಜಲಪಾತದಂತೆ ಧುಮ್ಮುಕ್ಕುತ್ತಿದೆ.
ಇದನ್ನೂ ಓದಿ :ಬ್ಲಿಂಕ್ ತಂಡದಿಂದ ವಿನೂತನ ಪ್ರಯೋಗ; ಹಾರರ್ ಫಿಲಂ ಟೀಸರ್ ಬಿಡುಗಡೆ
ಗಾಳಿಯ ಸಹಿತ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಮಂಗಳೂರಿನ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು. ನಿರಂತರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ವಿಪತ್ತು ನಿರ್ವಹಣೆಗೆ ಎಂದು ಮಂಗಳೂರಿಗೆ ಎಸ್ಡಿಆರ್ಎಫ್(SDRF) ಮತ್ತು ಪುತ್ತೂರಿಗೆ ಎಸ್ಡಿಆರ್ಎಫ್ (NDRF) ತಂಡಗಳನ್ನು ರವಾನಿಸಿದ್ದು. ಯಾವುದೇ ಸನ್ನಿವೇಶ ಎದುರಾದರು ಸಮರ್ಥವಾಗಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.