Site icon PowerTV

ಧಾರಕಾರ ಮಳೆಗೆ ಮನೆ ಗೋಡೆ ಕುಸಿದು 3 ವರ್ಷದ ಮಗು ಸಾ*ವು

ಬೆಳಗಾವಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮೂರು ವರ್ಷದ ಮಗು ಸಾವನ್ನಪ್ಪಿದ್ದು. ಮನೆಯ ಗೋಡೆ ಕುಸಿದು ಬಿದ್ದು ಕೀರ್ತಿಲಾ ನಾಗೇಶ್​ ಪೂಜಾರಿ ಎಂಬ ಮಗು ಸಾವನ್ನಪ್ಪಿದೆ.

ಬೆಳಗಾವಿ ಜಿಲ್ಲೆಯ, ಗೋಕಾಕ್ ನಗರದ, ಮಹಲಿಂಗೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಮೂರು ವರ್ಷದ ಮಗು ಮತ್ತು ಆಕೆಯ ಅಕ್ಕ ರೂಮಿನಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ ಇಡಿ ಸುರಿದ ಮಳೆಗೆ ಮನೆಯ ಗೋಡೆ ನೆನೆದು ಬೆಳಗಿನ ಜಾವ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮೂರು ವರ್ಷದ ಕೀರ್ತಿಲಾ ನಾಗೇಶ್​ ಪೂಜಾರಿ ಸಾವನ್ನಪ್ಪಿದ್ದು. ಆಕೆಯ 4 ವರ್ಷದ ಅಕ್ಕನಿಗೆ ಗಾಯವಾಗಿದೆ.

ಇದನ್ನೂ ಓದಿ :ಅಂಬೇಡ್ಕರ್​ ಸತ್ತಾಗ 3 ಅಡಿ ಜಾಗ ಕೊಡಲಿಲ್ಲ, ಈಗ ಅಂಬೇಡ್ಕರ್​ ಹುಲಿಗಳು ಅಂತ ಹೇಳ್ತಾರೆ: ಆರ್.ಅಶೋಕ್​

ಪಕ್ಕದ ರೂಮಿನಲ್ಲಿ ಮಲಗಿದ್ದ ತಂದೆ-ತಾಯಿ ಅಪಾಯದಿಂದ ಪಾರಾಗಿದ್ದು. ಬಾಲಕಿ ಶವವನ್ನು ಗೋಕಾಕ್​ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್​ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಗೋಕಾಕ್​ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version