ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ನಡೆಸಿದ ರೋಡ್ ಶೋನಲ್ಲಿ ಆಫ್ರಿಕಾದ ವಿದ್ಯಾರ್ಥಿಗಳು ಭಾಗಿಯಾಗಿದ್ದು. ಭಯೋತ್ಫಾದನೆಯನ್ನ ನಿರ್ಮೂಲನೆ ಮಾಡಿ ಎನ್ನುವ ಬ್ಯಾನರ್ಗಳನ್ನ ಹಿಡಿದು ಮೋದಿಯನ್ನ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತವರು ನೆಲೆ ಗುಜರಾತ್ಗೆ ಭೇಟಿ ನೀಡಿದ್ದು. ಈ ವೇಳೆ ಸಾವಿರಾರು ಕೋಟಿ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ರೋಡ್ ಶೋ ನಡೆಸಿದ ಪ್ರಧಾನಿ ಮೋದಿಗೆ ಆಫ್ರಿಕಾದ ವಿದ್ಯಾರ್ಥಿಗಳು ಸ್ವಾಗತ ನೀಡಿದ್ದು. ಭಯೋತ್ಪಾದನೆ ವಿರುದ್ದದ ಫಲಕಗಳನ್ನೂ ಹಿಡಿದು ಪ್ರಧಾನಿಯನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ :ಗನ್ಮ್ಯಾನ್ಗಳ ಜೊತೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ; ಸ್ಕಾಟ್ಲೆಂಡ್ ಯೂಟ್ಯೂಬರ್ನಿಂದ ಸಿಕ್ತು ವಿಡಿಯೋ
ಪ್ರಧಾನಿ ಮೋದಿ ನಡೆಸಿದ ರೋಡ್ ಶೋನಲ್ಲಿ ಭಾಗಿಯಾಗಿದ್ದ ಆಫ್ರೀಕನ್ ವಿದ್ಯಾರ್ಥಿಗಳು “ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಎನ್ನುವ ಬ್ಯಾನರ್ಗಳನ್ನು ಹಿಡಿದಿದ್ದರು. ಭಾರತ ನ್ಯಾಯಯುತವಾಗಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿತು. ಭಾರತದ ಧೈರ್ಯವು ಭಯೋತ್ಪಾದನೆಯ ದುಷ್ಟತನವನ್ನು ಕೊನೆಗೊಳಿಸುವ ಬೆಳಕು ಮುಂತಾದ ಉಲ್ಲೇಖಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಆಫ್ರಿಕನ್ ಸಮುದಾಯದ ಸದಸ್ಯರು ಪ್ರಧಾನಿಯನ್ನು ಸ್ವಾಗತಿಸಿದರು.
ಇದನ್ನೂ ಓದಿ :BJP ಶಾಸಕರ ಅಮಾನತು ವಾಪಸ್: ಸ್ಪೀಕರ್ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಟೀಕೆ
ಈ ವೇಳೆ ಭಾರತ್ ಮಾತಾ ಕಿ ಜೈ, ಮೋದಿ-ಮೋದಿ ಮತ್ತು ವಂದೇ ಮಾತರಂ ಘೋಷಣೆಗಳು ರೋಡ್ ಶೋ ನಡೆದ ಬೀದಿಗಳಲ್ಲಿ ಪ್ರತಿಧ್ವನಿಸಿದವು, ಜನರು ವಿಶೇಷ ಸಿಂಧೂರ್ ಸಮ್ಮಾನ್ ಯಾತ್ರೆಯಲ್ಲಿ ಭಾಗವಹಿಸಿ, ರಾಷ್ಟ್ರಧ್ವಜವನ್ನು ಬೀಸುತ್ತಾ ಮತ್ತು ಪ್ರಧಾನಿಯವರ ಮೇಲೆ ಹೂವುಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬವೂ ಈ ರೋಡ್ ಶೋನಲ್ಲಿ ಭಾಗಿಯಾಗಿ ಪ್ರಧಾನಿ ಮೇಲೆ ಹೂವಿನ ಸುರಿಮಳೆ ಸುರಿಸಿದ್ದಾರೆ.