Site icon PowerTV

ಹಣಕ್ಕಾಗಿ ಭಾರತದ ಗೌಪ್ಯ ಮಾಹಿತಿಯನ್ನ ಪಾಕ್​ಗೆ ಹಂಚಿಕೊಳ್ಳುತ್ತಿದ್ದ ದೇಶದ್ರೋಹಿ ಬಂಧನ

ಗಾಂಧೀನಗರ: ಭಾರತೀಯ ವಾಯುಪಡೆ ಮತ್ತು ಗಡಿ ಭದ್ರತಾ ಪಡೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು 28 ವರ್ಷದ ಸಹದೇವ್​ ಸಿಂಗ್​ ಗೋಹಿಲ್​ ಎಂದು ಗುರುತಿಸಲಾಗಿದೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ, ಭಾರತೀಯ ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (BSF) ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಚ್ ಜಿಲ್ಲೆಯ 28 ವರ್ಷದ ವ್ಯಕ್ತಿಯನ್ನು ಬಂಧಿಸಿದೆ. ಸಹದೇವ್‌ಸಿಂಗ್  ಗೋಹಿಲ್ ಎಂಬ ವ್ಯಕ್ತಿ ಕಚ್‌ನ ಮಾಧ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮಹಾಮಾರಿಯಿಂದ ಹೆಚ್ಚಿನ ಸಾವು-ನೋವು ಉಂಟಾಗಲಿದೆ; ಯುದ್ದದ ಭೀತಿ ಮತ್ತೆ ಆರಂಭವಾಗಲಿದೆ: ಕೋಡಿ ಶ್ರೀ

ಇನ್ನು ಬಂಧಿತ ಗೋಹಿಲ್​ 2023ರ ಮಧ್ಯಭಾಗದಿಂದ ಆದಿತಿ ಭಾರದ್ವಾಜ್ ಎಂಬ ಪಾಕಿಸ್ತಾನಿ ಮಹಿಳಾ ಏಜೆಂಟ್‌ ಜೊತೆ ಸಂಪರ್ಕದಲ್ಲಿದ್ದ ಎಂದು ATS ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಈತ ನೌಕಾಪಡೆ ಮತ್ತು BSF ಶಿಬಿರಗಳ ಪೋಟೊಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಿ ಏಜೆಂಟ್​ಗೆ ಕಳುಹಿಸಿದ್ದು. ಈ ಚಿತ್ರಗಳನ್ನು ಕಳುಹಿಸಲು ಆಕೆಯಿಂದ 40 ಸಾವಿರ ಹಣ ಪಡೆದಿದ್ದನು ಎಂದು ತಿಳಿದು ಬಂದಿದೆ.

Exit mobile version